ವಿಷಯುಕ್ತ ನೀರು ಕುಡಿದು 10 ಮೇಕೆ ಸಾವು

ಶಿರಾ: ವಿಷಪೂರಿತ ನೀರು ಕುಡಿದ ಪರಿಣಾಮ ಸುಮಾರು 10 ಮೇಕೆ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕು ಗೌಡಗೆರೆ ಹೋಬಳಿಯ ಪುರಲೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುರಹಳ್ಳಿ ಗ್ರಾಮದ ಗಿರಿಜಮ್ಮ, ಈರನಾಯಕ ಅವರಿಗೆ ಸೇರಿದ ಕುರಿಗಳನ್ನು ಮೇಯಿಸಲು ಜಮೀನಿಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಪ್ಲಾಸ್ಟಿಕ್ ಟಬ್ ನಲ್ಲಿ ಇಟ್ಟಿದ್ದ ನೀರನ್ನು ಮೇಕೆಗಳು ಕುಡಿದಿದ್ದು, ತಕ್ಷಣ ಎರಡು ಮೇಕೆಗಳು ಅಲ್ಲಿಯೇ ಸಾವನ್ನಪ್ಪಿದ್ದು, ಉಳಿದ 8 ಮೇಕೆ ಮನೆಗೆ ಬಂದಾಗ ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ, ಈ ಸಂಬಂಧ ಪಶು ಇಲಾಖಾಧಿಕಾರಿಗಳು ಭೇಟಿ ನೀಡಿ … Read more

ಟಿಟಿ ವಾಹನ ಪಲ್ಟಿ- ಮೂವರ ಸಾವು

ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಶಂಕರಿಬಾಯಿ (65), ಕುಮಾರ ನಾಯ್ಕ್ (46) ಮತ್ತು ಶ್ವೇತಾ (38) ಮೃತರಾಗಿದ್ದಾರೆ. ಐವರಿಗೆ ಗಂಭೀರ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಗ್ಗೆರೆ ಗ್ರಾಮದ ಬಳಿ ಟಿಟಿ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿ ವಾಹನ ಪಲ್ಟಿ ಹೊಡೆದಿದ್ದು, ಅದರಲ್ಲಿ ಮೂವರು … Read more

ಕೆರೆಯಲ್ಲಿ ಮೂವರು ನೀರು ಪಾಲು

ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ನಡೆದಿದೆ. ಮುದ್ದೇಗೌಡ (48ವ), ಬಸವೇಗೌಡ (45), ವಿನೋದ್(17)ಮೃತರಾಗಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಯುಗಾದಿ ಹಬ್ಬ ಹಿನ್ನೆಲೆ ಹಸುಗಳನ್ನು ತೊಳೆಯಲು ವಿನೋದ್ ಕೆರೆಗೆ ಹೋಗಿದ್ದರು. ಈ ವೇಳೆ ವಿನೋದ್ ನನ್ನು ಹಸು ಕೆರೆಗೆ ಎಳೆದೊಯ್ದಿದೆ. ಆತನ ರಕ್ಷಣೆಗೆ ಮುದ್ದೇಗೌಡ ಮತ್ತು ಬಸವೇಗೌಡ ಕೆರೆಗೆ ಇಳಿದಿದ್ದಾರೆ. ಈಜು ಬಾರದೆ ನೀರಿನಲ್ಲಿ ಮುಳುಗಿ ಮೂವರೂ ಮೃತಪಟ್ಟಿದ್ದಾರೆ.

ಐರನ್ ಬಾಕ್ಸ್ ನಿಂದ ಅಗ್ನಿ ಅವಘಡ- ಮನೆಗೆ ಬೆಂಕಿ

ಬೆಂಗಳೂರು: ಐರನ್ ಬಾಕ್ಸ್ ನಿಂದ ಅಗ್ನಿ ಅವಘಡ ಸಂಭವಿಸಿ ಸಂಪೂರ್ಣ ಮನೆಯೇ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರಂ ನ 13 ನೇ ಕ್ರಾಸ್ ನಲ್ಲಿ ಬಟ್ಟೆ ಐರನ್ ಮಾಡಿದ ಬಳಿಕ ಸ್ವಿಚ್ ಆಫ್ ಮಾಡದೇ ಮನೆಗೆ ಬೀಗ ಹಾಕಿ ಹೋಗಿದ್ದು, ಇದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ವ್ಯಕ್ತಿಯೊಬ್ಬನ ಬರ್ಬರ ಕೊಲೆ

ಕುಣಿಗಲ್: ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಸ್ವಾಮಿ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ಎಸೆದು ಹೋಗಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಇಸ್ಲಾಂಪುರ ವಾಸಿ ಅಜರುದ್ದೀನ್ (30) ಎಂದು ಗುರುತಿಸಲಾಗಿದೆ, ಬುಧವಾರ ಸಂಜೆ ರಂಗನಾಥ ಸ್ವಾಮಿ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಗುಡ್ಡದ ಸಮೀಪದ ಬಂಡೆಗಳ ಬಳಿ ಕೆಟ್ಟ ವಾಸನೆ ಬರತೊಡಗಿದ್ದ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬನನ್ನು … Read more

ಹನಿ ಟ್ರಾಪ್ ವಿಚಾರಕ್ಕೆ ತಾರ್ಕಿಕ ಅಂತ್ಯ ಅಗತ್ಯ

ಗುಬ್ಬಿ: ರಾಷ್ಟ್ರಾದ್ಯಾಂತ ಸದ್ದು ಮಾಡುತ್ತಿರುವ ಹನಿ ಟ್ರಾಪ್ ವಿಚಾರಕ್ಕೆ ತಾರ್ಕಿಕ ಅಂತ್ಯ ಸಿಗಬೇಕು, ವೈಯಕ್ತಿಕ ಜೀವನದ ತೇಜೋವಧೆ ಆಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಗುಬ್ಬಿ ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೈತರಿಗೆ ಪಂಪು, ಮೋಟಾರ್ ವಿತರಣೆ ಮಾಡಿ ಮಾತನಾಡಿ, ಯಾರೇ ಇಂತಹ ಕೃತ್ಯ ಎಸುಗುತ್ತಾರೋ ಅಂತವರಿಗೆ ಕಾನೂನು ಶಿಕ್ಷೆ ಆಗಬೇಕಾಗಿದೆ ಎಂದ ಅವರು ಎರಡು ವರ್ಷಗಳ ಕಾಲ ನಮ್ಮ ಸರ್ಕಾರ ಸಹ ಗ್ರಾಮ ಪಂಚಾಯಿತಿ ವತಿಯಿಂದ … Read more

ಟಿವಿಎಸ್ ಮೇಲೆ ಲಾರಿ ಪಲ್ಟಿ- ಓರ್ವ ಸಾವು

ಹುಳಿಯಾರು: ರಾಗಿ ತುಂಬಿದ್ದ ಲಾರಿಯೊಂದು ಆಯ ತಪ್ಪಿ ಟಿವಿಎಸ್ ಮೇಲೆ ಪಲ್ಟಿಯಾದ ಪರಿಣಾಮ ಟಿವಿಎಸ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಈ ಘಟನೆಯಿಂದ ಆಕ್ರೋಶಗೊಂಡ ಜನರು ಹಂಪ್ಸ್ ಹಾಕುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ರಸ್ತೆಗೆ ಅಡ್ಡಲಾಗಿ ಶಾಮಿಯಾನ ಹಾಕಿ ಪ್ರತಿಭಟನೆ ಮಾಡಿದ ಘಟನೆ ಹುಳಿಯಾರು ಹೋಬಳಿಯ ಯಗಚೀಹಳ್ಳಿ ಯಲ್ಲಿ ಬುಧವಾರ ಜರುಗಿದೆ. ಹುಳಿಯಾರು ನಾಫೆಡ್ ಕೇಂದ್ರದಿಂದ ರಾಗಿ ತುಂಬಿಕೊಂಡು ಶಿರಾ ಗೋಡನ್ ಗೆ ಹೋಗುತ್ತಿದ್ದ ಲಾರಿ ಯಗಚೀಹಳ್ಳಿ ಬಳಿ ಗಾಣದಾಳು ಸೊಸೈಟಿಯಿಂದ ರೇಷನ್ ತೆಗೆದುಕೊಂಡು ತನ್ನೂರಾದ ಕೆ.ಎಸ್.ಪಾಳ್ಯಕ್ಕೆ … Read more

ಅಪಘಾತದಲ್ಲಿ ಯುವತಿ ಸಾವು

ಕುಣಿಗಲ್: ಬೈಕು- ಕ್ಯಾಂಟರ್ ಅಪಘಾತ ಸಂ‘ವಿಸಿ ಯುವತಿ ಮೃತಪಟ್ಟಿರುವ ಧಾರಣಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಚೆಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮೃತಳನ್ನು ಮಾಗಡಿ ತಾಲೂಕಿನ ಬ್ಯಾಡರಹಳ್ಳಿಯ ಧನುಶ್ರೀ (19) ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ತಾಂತ್ರಿಕ ಕಾಲೇಜ್ ನ ವಿದ್ಯಾರ್ಥಿನಿ ಎನ್ನಲಾಗಿದೆ, ಊರ ಹಬ್ಬಕ್ಕೆಂದು ಆಗಮಿಸಿ ಮಂಗಳವಾರ ಬೆಳಗ್ಗೆ ಸಹೋದರನೊಂದಿಗೆ ಬೈಕ್ ನಲ್ಲಿ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಆಗಮಿಸುವಾಗ, ಅಂಚೆಪಾಳ್ಯ ಸರ್ವಿಸ್ ರಸ್ತೆಯಲ್ಲಿ ವೇಗವಾಗಿ ಬಂದ ಕ್ಯಾಂಟರ್ … Read more

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಧುಗಿರಿ: ಬಂಗಾರದ ಒಡವೆ ಆಸೆಗಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 60 ಸಾವಿರ ದಂಡ ವಿಧಿಸಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ವಿಧಿಸಿ ಆದೇಶಿಸಿದೆ. 2019 ರ ಜೂನ್ 6 ರಂದು ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದ ಲೇ.ಮೂಡಲಗಿರಿಯಪ್ಪ ಎಂಬುವರ ಪತ್ನಿ ಗಿರಿಜಮ್ಮ ಎಂಬುವರ ಮೈಮೇಲಿದ್ದ ಬಂಗಾರದ ಒಡವೆಯ ಆಸೆಗಾಗಿ ಸಂಬಂಧಿಕಾರದ ಆರೋಪಿಗಳಾದ ಶಿವಕುಮಾರ್ ಮತ್ತು ಮಂಜುನಾಥ್ ಇಬ್ಬರು ಸೇರಿಕೊಂಡು ಮಧುಗಿರಿ ತಾಲ್ಲೂಕು ಗರಣಿ … Read more

ಬಿರುಗಾಳಿ ಮಳೆಗೆ ಅಡಿಕೆ, ತೆಂಗು ಧರೆಗೆ

ಗುಬ್ಬಿ: ತಾಲೂಕಿನ ಸಿ.ಎಸ್.ಪುರ ಹೋಬಳಿಯ ಹುರುಳುಗೆರೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸುರಿದ ಬಿರುಗಾಳಿ ಹಾಗೂ ಮಳೆಗೆ ನೂರಾರು ಅಡಿಕೆ ಮರಗಳು ತೆಂಗು, ಬಾಳೆ ಸಂಪೂರ್ಣವಾಗಿ ನಾಶವಾಗಿದೆ. ಗ್ರಾಮದ ಸೋಮಶೇಖರ್, ಶ್ರೀಧರ್, ರಾಯಪ್ಪ ಕಿಟ್ಟಪ್ಪ, ಪ್ರಕಾಶ್ ಸೇರಿದಂತೆ ಇನ್ನೂ ಹಲವು ರೈತರ ತೋಟಗಳಲ್ಲಿ ಸಾಕಷ್ಟು ಗಿಡಗಳು ನಾಶವಾಗಿವೆ, ಇದೆ ಅಲ್ಲದೆ ವಿದ್ಯುತ್ ಕಂಬಗಳು, ಟಿಸಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಾಗಿದ್ದು ಗ್ರಾಮಕ್ಕೂ ವಿದ್ಯುತ್ ನ ಸಮಸ್ಯೆ ಉಂಟಾಗಿದೆ. ಇನ್ನು ಚಂದ್ರಶೇಖರಪುರದಲ್ಲಿಯೇ ವಿದ್ಯುತ್ ಕಂಬಗಳು, ಬೃಹತ್ ಮರ ಬಿದ್ದು, ಮನೆಗಳಿಗೆ … Read more