ಕುಣಿಗಲ್: ಬೈಕು- ಕ್ಯಾಂಟರ್ ಅಪಘಾತ ಸಂ‘ವಿಸಿ ಯುವತಿ ಮೃತಪಟ್ಟಿರುವ ಧಾರಣಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಚೆಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮೃತಳನ್ನು ಮಾಗಡಿ ತಾಲೂಕಿನ ಬ್ಯಾಡರಹಳ್ಳಿಯ ಧನುಶ್ರೀ (19) ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ತಾಂತ್ರಿಕ ಕಾಲೇಜ್ ನ ವಿದ್ಯಾರ್ಥಿನಿ ಎನ್ನಲಾಗಿದೆ, ಊರ ಹಬ್ಬಕ್ಕೆಂದು ಆಗಮಿಸಿ ಮಂಗಳವಾರ ಬೆಳಗ್ಗೆ ಸಹೋದರನೊಂದಿಗೆ ಬೈಕ್ ನಲ್ಲಿ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಆಗಮಿಸುವಾಗ, ಅಂಚೆಪಾಳ್ಯ ಸರ್ವಿಸ್ ರಸ್ತೆಯಲ್ಲಿ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಆಯತಪ್ಪಿ ಬಿದ್ದು ಹೆಲ್ಮೆಟ್ ಧರಿಸಿದ್ದ ಯುವತಿ ಮೇಲೆ ಹರಿದ ಪರಿಣಾಮ ಮೃತಪಟ್ಟಿದ್ದಾಳೆ. ಯುವತಿಯ ಸಹೋದರ ನೀಡಿದ ದೂರಿದ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪಘಾತದಲ್ಲಿ ಯುವತಿ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು