ಹುಬ್ಬಳ್ಳಿ: ಹು-ಧಾ.ವನ್ನು ಮಾದಕ ವ್ಯಸನಿಗಳಿಂದ ಮುಕ್ತ ಮಾಡುವ ಉದ್ದೇಶದಿಂದ ಮಾದಕವ್ಯಸನಿಗಳ ಮೇಲೆ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಶುಕ್ರವಾರ ಒಟ್ಟು 505 ಶಂಕಿತ ವ್ಯಸನಿಗಳನ್ನು ಗುರುತಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ 197 ಜನರು ಸೇವಿಸಿರುವುದು ಪತ್ತೆಯಾಗಿದೆ, ಅವರ ವಿರುದ್ಧ ವಿವಿಧ ಠಾಣೆಗಳಲ್ಲಿ 46 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನಿಗಳ ಜಾಗೃತಿ ಶಿಬಿರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾದಕವಸ್ತು ಮಾರಾಟ ಮಾಡುವ ಪೆಡ್ಲರ್ ಗಳ ಮೇಲೆ ನಿಗಾವಹಿಸಲಾಗುತ್ತಿದೆ. ಈ ಹಿಂದೆ ನಾಲ್ಕು ಬಾರಿ ಕಾರ್ಯಾಚರಣೆ ನಡೆಸಲಾಗಿತ್ತು. ಆಗ 2ಸಾವಿರ ಜನರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಲ್ಲಿ ಪಾಸಿಟಿವ್ ಕಂಡು ಬಂದಿತ್ತು. 200ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು. ಈಗ ಐದನೇ ಬಾರಿ ಈ ಅಭಿಯಾನ ನಡೆಸಲಾಗಿದ್ದು, ಶೇ. 40ರಷ್ಟು ಜನರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿಸಿದರು.ಮೊದಲ ಬಾರಿ ಪ್ರಕರಣ ಕಂಡುಬಂದವರನ್ನು ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಗೆ ಅವಕಾಶ ಇರುತ್ತದೆ. ಎರಡನೇ ಬಾರಿ ಕಂಡುಬಂದರೆ ಅಂಥವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಬಹುದು ಎಂದು ತಿಳಿಸಿದರು.
ಮಾದಕ ವ್ಯಸನಿಗಳ ಪತ್ತೆ- 46 ಪ್ರಕರಣ ದಾಖಲು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು