ಹುಳಿಯಾರು: ಹೊಟ್ಟೆನೋವು ತಾಳಲಾರದೆ ಕಾಳಿನ ಮಾತ್ರೆ ಸೇವಿಸಿ ಪದವಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಳಿಯಾರು ಹೋಬಳಿಯ ಕಲ್ಲೇನಹಳ್ಳಿಯಲ್ಲಿ ನಡೆದಿದೆ.
ಭವ್ಯ (26) ಆತ್ಮಹತ್ಯೆ ಮಾಡಿಕೊಂಡ ದುರ್ವೈವಿಯಾಗಿದ್ದಾರೆ, ಈಕೆ ಚಿಕ್ಕನಾಯಕನ ಹಳ್ಳಿ ಪದವಿ ಕಾಲೇಜಿನಲ್ಲಿ ತೃತೀಯ ಬಿಎ ವ್ಯಾಸಂಗ ಮಾಡುತ್ತಿದ್ದಳು, ಈಕೆಗೆ ಆಗಾಗ ಬರುತ್ತಿದ್ದ ಹೊಟ್ಟೆನೋವನ್ನು ತಾಳಲಾರದೆ ಗುರುವಾರ ಮಧ್ಯಾಹ್ನ ಮನೆಯಲ್ಲಿದ್ದ ಕಾಳಿನ ಮಾತ್ರೆ ಸೇವಿಸಿದ್ದಾರೆ.
ವಿಷಯ ತಿಳಿದ ಪೋಷಕರು ತಕ್ಷಣ ಚಿಕ್ಕನಾಯಕನ ಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರು ಎಳೆದಿದ್ದಾಳೆ, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಆತ್ಮಹತ್ಯೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು