--ಇಲ್ಲಿ ಜಾಹೀರಾತು--

ಮಾಜಿ ಪ್ರೇಮಿ ಬ್ಲಾಕ್ ಮೇಲ್ : ದೈಹಿಕ ಶಿಕ್ಷಕಿ ಆತ್ಮಹತ್ಯೆ!

On: April 21, 2025 2:24 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಗದಗ: ಮಾಜಿ ಪ್ರೇಮಿಯ ಬ್ಲಾಕ್ ಮೇಲ್ ಗೆ ಬೇಸತ್ತ ದೈಹಿಕ ಶಿಕ್ಷಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗದ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಅಸುಂಡಿ ಗ್ರಾಮದ 29 ವರ್ಷದ ಸೈರಾಬಾನು ನದಾಫ್ ಎಂಬ ದೈಹಿಕ ಶಿಕ್ಷಣ ಶಿಕ್ಷಕಿ ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಗೆ 8 ದಿನ ಇದ್ದರಿಂದ ಯುವತಿ ಪೋಷಕರು ಮದುವೆ ಸಾಮಾಗ್ರಿಗಳನ್ನು ತರಲು ಹೋಗಿದ್ದರು. ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ 5 ವರ್ಷಗಳಿಂದ ಮೈಲಾರಿ ಎಂಬಾತನನ್ನು ಸೈರಾಬಾನು ಪ್ರೀತಿ ಮಾಡುತಿದ್ದಳು. ಆದರೆ, ಕೆಲ ದಿನಗಳ ಹಿಂದೆ ಲವ್ ಬ್ರೇಕ್ ಆಪ್ ಆಗಿತ್ತು. ಲವ್ ಬ್ರೇಕ್ ಅಪ್ ಬಳಿಕ ಪೊಷಕರ ಒತ್ತಾಯ ಮೇರೆಗೆ ಬೇರೆ ಮದುವೆಗೆ ಒಪ್ಪಿಕೊಂಡಿದ್ದಳು. ಆದರೆ, ಶಿಕ್ಷಕಿಯ ಮದುವೆ ತಯಾರಿ ನೋಡಿ ಲವರ್ ಮೈಲಾರಿಯಿದ ಮತ್ತೆ ಟಾರ್ಚರ್ ಶುರುವಾಗಿದೆ. ಬೇರೆ ಮದುವೆ ಆದರೆ ಇಬ್ಬರ ಪೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕ್ತಿದ್ದಾನೆ. ಇದರಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆ ನಿರ್ಧಾರ ಮಾಡಿಕೊಂಡಿದ್ದಾರೆ.
ಸೈರಾಬಾನು ನ್ಯಾಷನಲ್ ಲೇವಲ್ ಕುಸ್ತಿಪಟು ಆಗಿ ಸಾಕಷ್ಟು ಹೆಸರು ಮಾಡಿದ್ದರು. ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದರು. ಇನ್ನೊಂದೆಡೆ ಇಡೀ ಮನೆ ಜವಾಬ್ದಾರಿಯನ್ನು ಈ ಮೃತ ಸೈರಾಬಾನು ಹೊತ್ತಿದ್ದರು. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now