ವಯಾಡೆಕ್ಟ್ ಬಿದ್ದು ಆಟೋ ಚಾಲಕ ಸಾವು

ಬೆಂಗಳೂರು: ಮೆಟ್ರೊ ಕಾಮಗಾರಿ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಆಟೊ ಚಾಲಕ ಮೃತಪಟ್ಟ ಘಟನೆಗೆ ಬಿಎಂಆರ್ ಸಿಎಲ್ ವಿಷಾಧ ವ್ಯಕ್ತ ಪಡಿಸಿದೆ. ಲಾರಿಯಲ್ಲಿ ಸಾಗಿಸುತ್ತಿದ್ದ ವಯಾಡೆಕ್ಟ್ (ಬೃಹತ್ ತಡೆಗೋಡೆ) ಉರುಳಿ ಬಿದ್ದ ಪರಿಣಾಮ ಆಟೊ ಚಾಲಕ ಖಾಸಿಂ ಸಾಬ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಶಿಡ್ಲಘಟ್ಟ ಮೂಲದ ಖಾಸೀಂ ಸಾಬ್ ಕುಟುಂಬ ಬೆಂಗಳೂರಿನಲ್ಲಿ ವಾಸವಿತ್ತು ಎಂದು ಸಹ ಚಾಲಕರು ಮಾಹಿತಿ ನೀಡಿದ್ದಾರೆ. ತಡರಾತ್ರಿ ಏರ್ಪೋರ್ಟ್ ಮಾರ್ಗದ ಮೆಟ್ರೊ ಕಾಮಗಾರಿಗೆ ಬಳಸಲು … Read more

ರಿಹಾಬ್ ಸೆಂಟರ್ ನಲ್ಲಿ ವ್ಯಕ್ತಿ ಮೇಲೆ ಮನಸೋ ಇಚ್ಛೆ ಹಲ್ಲೆ!

ಬೆಂಗಳೂರು: ಖಾಸಗಿ ಪುನರ್ವಸತಿ ಕೇಂದ್ರ(REHAB CENTER)ವೊಂದರಲ್ಲಿ ರೋಗಿಯೊಬ್ಬರ ಮೇಲೆ ಅಲ್ಲಿನ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ. ಪುನರ್ವಸತಿ ಕೇಂದ್ರದವಾರ್ಡನ್ ಬಟ್ಟೆ ಒಗೆಯಲು ಮತ್ತು ಶೌಚಾಲಯ ಸ್ವಚ್ಛಗೊಳಿಸಲು ನಿರಾಕರಿಸಿದ ಕಾರಣ, ಸಿಬ್ಬಂದಿ ರೋಗಿಯೊಬ್ಬನನ್ನು ಥಳಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಪುನರ್ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋ ಪ್ರಕಾರ, ರೋಗಿಯನ್ನು ಕೋಣೆಯಲ್ಲಿ ಮೂಲೆಗೆ ಸೇರಿಸಿಕೊಂಡು ವ್ಯಕ್ತಿಯೊಬ್ಬ ಕೋಲಿನಿಂದ ನಿರಂತರವಾಗಿ ಹೊಡೆಯುತ್ತಿದ್ದಾನೆ. ಆದರೆ ಇದೇ ಸಂದರ್ಭದಲ್ಲಿ … Read more

ಕಾಳಘಟ್ಟಮ್ಮ ದೇಗಲದಲ್ಲಿ ಕಳ್ಳತನ

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ತೋವಿನಕೆರೆ ಗ್ರಾಮದ ಕಾಳಘಟ್ಟಮ್ಮ ದೇವಾಲಯದ ಬೀಗ ಮುರಿದು ಕಳ್ಳರು ಕಳ್ಳತನ ಎಸಗಿದ್ದಾರೆ. ದೇವಿ ಮೇಲಿದ್ದ ಚಿನ್ನದ ತಾಳಿ, ಚಿನ್ನದ ಗುಂಡು, ಬೆಳ್ಳಿ ಸರ ಸೇರಿದಂತೆ ಬೆಳ್ಳಿ ಆಭರಣಗಳು ಕಳ್ಳತನವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ದಂಡಿನಶಿವರ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಕಾಂಗ್ರೆಸ್ ಮುಖಂಡ ರಾಜಣ್ಣನ ಬರ್ಬರ ಕೊಲೆ

ಮಧುಗಿರಿ: ಸ್ನೇಹಿತರ ಜತೆ ರಾತ್ರಿ ಮದ್ಯಪಾನ ಮಾಡಿದ ವ್ಯಕ್ತಿಗೆ ಬೆಳಿಗ್ಗೆ ಆಗುವ ವೇಳೆ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ತಾಲೂಕಿನ ಮಿಡಿಗೇಶಿ ಹೋಬಳಿ ವೀರ ಚಿನ್ನೇನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ರಾಜಣ್ಣ ಅಲಿಯಾಸ್ ಪಾಣಿ (46) ಹತ್ಯೇಗೀಡಾದ ವ್ಯಕ್ತಿ. ಮನೆ ಪಕ್ಕದ ಈರಮ್ಮ ಎಂಬುವವರ ಮನೆಯ ಮುಂದೆ ಮದ್ಯಪಾನ ಮಾಡಿಸಿ ಕೈ ಕಾಲು-ಕಾಲು ಕಟ್ಟಿ ಚಾಕುವಿನಿಂದ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ. ಕತ್ತಿನ ಮೇಲೆ ಹಾಗೂ ಹೊಟ್ಟೆ ಬಳಿ ಕೋಳಿ ಕೊಯ್ಯುವ ಚೂರಿಯಿಂದ … Read more

ತಾಯಿ ಮತ್ತು ಮಗನ ಹತ್ಯೆ

ಚಿಕ್ಕೋಡಿ: ತಾಯಿ ಮತ್ತು ಮಗನ ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಚಂದ್ರವ್ವ ಅಪ್ಪಾರಾಯ ಇಚೇರಿ(65), ಅವರ ಪುತ್ರ ವಿಠ್ಠಲ ಅಪ್ಪಾರಾಯ ಇಚೇರಿ(42) ಮೃತರು. ಮೃತರು ಕೊಡಗನೂರುನಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿರುವ ಸಣ್ಣ ಮನೆಯಲ್ಲಿ ವಾಸವಿದ್ದರು. ಚಂದ್ರವ್ವ ಪತಿ ನಿಧರನಾಗಿದ್ದು, ಮಗಳು ವಿವಾಹವಾಗಿ ಬೇರೆಡೆ ವಾಸವಿದ್ದಾರೆ. ಅಪಘಾತ ಪ್ರಕರಣವೊಂದರಲ್ಲಿ ಚಂದ್ರವ್ವ ಅವರು ಸಂಧಾನಕ್ಕೆ ನಿರಾಕರಿಸಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಕಾರಣಕ್ಕೆ ಹತ್ಯೆಯಾಗಿರಬಹುದು ಎಂದು ಸ್ಥಳೀಯರು ಶಂಕೆ … Read more

ಸೈಬರ್ ಕಳ್ಳರ ಬಗ್ಗೆ ವಿದ್ಯಾರ್ಥಿಗಳೇ ಎಚ್ಚರ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಸ್ ಎಸ್ ಎಲ್ ಸಿ ಫಲಿತಾಂಶ ಘೋಷಣೆಯಾಗಬೇಕಿದೆ. ಇದರ ನಡುವೆ ಸೈಬರ್ ಕಳ್ಳರು ಹೊಸದೊಂದು ದಾರಿ ಹಿಡಿದಿದ್ದು, ವಿದ್ಯಾರ್ಥಿಗಳು, ಪೋಷಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆಯಾಗಿದೆ. ಹತ್ತನೆ ತರಗತಿ ಫಲಿತಾಂಶ ಪ್ರಕಟವಾಗಬೇಕಿದೆ. ಈ ವೇಳೆಯಲ್ಲಿ ಆನ್ ಲೈನ್ ವಂಚಕರು ಹೊಸದಾದ ರೀತಿಯ ವಂಚನೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಎಚ್ಚರದಿಂದ ಇರುವಂತೆ ತಿಳಿಸಿದೆ.ಆನ್ ಲೈನ್ … Read more

ನಾವು ಯಾವ ಸಮಾಜವನ್ನು ಒಡೆದಿಲ್ಲ: ಕೆ ಎನ್ ಆರ್

ಹಾಸನ: ಬಿಜೆಪಿಯವರು ಗೋಡ್ಸೆ ಹಿಂದುತ್ವ ಪ್ರತಿಪಾದಿಸುತ್ತಾರೆ, ಕಾಂಗ್ರೆಸ್ ನವರಾದ ನಾವು ಗಾಂಧೀಜಿ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದು ಸಮಾಜದ ಮತಕ್ಕಾಗಿ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ನಾವು ಯಾವ ಸಮಾಜವನ್ನು ಒಡೆದಿಲ್ಲ ಎಂದರು. ಹಿಂದುವಾಗಿ ಹುಟ್ಟಿದ್ದೇನೆ ಹಿಂದುವಾಗಿ ಸಾಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿರಲಿಲ್ಲವೇ? ಹಿಂದು ಹೆಸರಿನಲ್ಲಿ ಏನೆಲ್ಲಾ ಮೂಢನಂಬಿಕೆಗಳು, ದಬ್ಬಾಳಿಕೆಗಳು, ಅಸ್ಪಶ್ಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದ ಬೆಸತ್ತು ನಾನು ಹಿಂದುವಾಗಿ ಸಾಯಲ್ಲ ಎಂದು ಬೌದ್ಧ ಧರ್ಮ ಸ್ವೀಕರಿಸಿದರು. … Read more

ಸಂವಿಧಾನ ಇಲ್ಲದಿದ್ರೆ ಕುರಿ ಕಾಯಬೇಕಿತ್ತು: ಸಿಎಂ

ಬೆಂಗಳೂರು: ಒಂದು ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಒಂದು ವೇಳೆ ಇಲ್ಲದಿದ್ದರೆ ನಾನು ಜೀವನಪೂರ್ತಿ ಊರಿನಲ್ಲಿ ಕುರಿ ಕಾಯುತ್ತಾ ಇರಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಂಬೇಡ್ಕರ್ ಅವರ 135 ನೇ ಜಯಂತಿಯ ಹಿನ್ನಲೆ ಮಾತನಾಡಿ, ಬಾಬಾ ಸಾಹೇಬರು ರಚಿಸಿದ ಸಂವಿಧಾನ ಇಲ್ಲದಿದ್ದರೆ ನಾನು ನನ್ನೂರಿನಲ್ಲಿ ಕುರಿಯನ್ನೋ, ದನವನ್ನೋ ಕಾಯುತ್ತಾ ಇರುತ್ತಿದ್ದೆ.ನಾನು ಎರಡೆರಡು ಬಾರಿ ಮುಖ್ಯಮಂತ್ರಿಯಾಗಿರುವುದು ಸಂವಿಧಾನದಿಂದ ಎಂದರು.ಯಾವುದೋ ಹಳ್ಳಿಯಿಂದ ಬಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದರೆ ಇದಕ್ಕೆ ಸಂವಿಧಾನವೇ ಕಾರಣ, ನನ್ನ … Read more

10 ವರ್ಷಗಳ ಹಿಂದಿನ ಜಾತಿ ಜನಗಣತಿ ಯದುವೀರ್ ಆರೋಪಕ್ಕೆ ಲಾಡ್ ತಿರುಗೇಟು

ಧಾರವಾಡ: ರಾಜ್ಯ ಸರ್ಕಾರ ಕಳೆದ 10 ವರ್ಷಗಳ ಹಿಂದಿನ ಜಾತಿ ಜನಗಣತಿಯನ್ನು ಈಗ ತರುತ್ತಿದೆ ಎಂಬ ಮೈಸೂರು ಸಂಸದ ಯದುವೀರ್ ಒಡೆಯರ್ ಅವರ ಆರೋಪಕ್ಕೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ 10 ವರ್ಷಗಳ ಹಿಂದಿನದು ಎಂದು ಮೈಸೂರು ಮಹಾರಾಜರು ಆರೋಪಿಸಿದ್ದಾರೆ. ಕಳೆದ 14 ವರ್ಷಗಳಿಂದ ಕೇಂದ್ರ ಸರ್ಕಾರ ಜನ ಗಣತಿಯನ್ನೇ ಮಾಡಿಸಿಲ್ಲ. ಅದರ ಬಗ್ಗೆ ಮಹಾರಾಜರು ಮೊದಲು ಮಾತನಾಡಲಿ.ಹತ್ತು ವರ್ಷಕ್ಕೊಮ್ಮೆ ಜನ ಗಣತಿ ಆಗಬೇಕು. 14 ವರ್ಷದಿಂದ ಕೇಂದ್ರ … Read more

ಕಾರು ಅಪಘಾತ: ನಾಲ್ವರ ಸಾವು

ಬೆಂಗಳೂರು: ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿ ಕಾರೊಂದು ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಂದು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಕಾರು ಚಾಲಕ ಗೋಪಾಲ್(45), ಗೋಪಾಲ್ (60), ಶಶಿಕಲಾ (55) ಮತ್ತು ದೀಪಿಕಾ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಮಕ್ಕಳಿಬ್ಬರು ಗಾಯಗೊಂಡಿದ್ದು, … Read more