ಮಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಕಾರಿಗೆ ಅಪಘಾತ ಮಾಡಿ ಬಳಿಕ ಮಾರಕಾಸ್ತ್ರಗಳಿಂದ ಹತೈಗೈಯ್ಯಲಾಗಿತ್ತು. ಇನ್ನೂ ಸಾವನ್ನಪ್ಪಿದ ಮಗನ ನೆನೆದು ಸುಹಾಶ್ ಶೆಟ್ಟಿ ತಾಯಿ ಕಣ್ಣೀರಿಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುತ್ವಕ್ಕಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಅಂತಿದ್ದ.ಈಗ ಅವನ ಪ್ರಾಣವನ್ನೇ ತೆಗೆದರು . ನಾವು ನಿನ್ನೆ ಬೆಳಗ್ಗೆ ಮದುವೆಯ ಕೆಲಸದಲ್ಲಿದ್ದೆವು. ಹಾಗಾಗಿ ಮಗನಿಗೆ ನ್ ಮಾಡಲು ಆಗಲಿಲ್ಲ. ರಾತ್ರಿ ಕಾಲ್ ಮಾಡಿದಾಗ ಕಾಲ್ ಸಿಗುತ್ತಿರಲಿಲ್ಲ ಎಂದರು.ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. 85% ಹಿಂದೂಗಳಿದ್ದರೂ ಅವರಿಗೆ ಹೆದರಿ ಬದುಕಬೇಕಾಗಿದೆ. ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುಹಾಶ್ ಶೆಟ್ಟಿ ಕೊಲೆ- ಕುಟುಂಬಸ್ಥರ ಆಕ್ರಂದನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು