ಕೊರಟಗೆರೆ: ಅಣ್ಣ ಮತ್ತು ಸ್ನೇಹಿತರ ಜೊತೆ ಈಜಲು ಹೋದ ಯುವಕನೋರ್ವ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತಿಮ್ಮಸಂದ್ರ ಗೋಕುಲ್ ಕೆರೆಯಲ್ಲಿ ವಂಶಿಹಳ್ಳಿ (ವಮಚ್ಚೆಹಳ್ಳಿ) ಗ್ರಾಮದ ಹನುಮಂತ ರಾಯಪ್ಪ ಎಂಬುವರ ಮಗ ಹೇಮಂತ್ ಕುಮಾರ್ (20)ದ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು, ಮೃತನು ದಾಬಸ್ ಪೇಟೆ ಸಮೀಪದ ನಿಡವಂದ ಇಂಡಸ್ಟ್ರಿಯಲ್ ಏರಿಯಾದ ಸೋಲಾರ್ ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮೃತ ಯುವಕನು ಯಾಕ್ಟರಿಗೆ ಮಧ್ಯಾಹ್ನ 2 ಗಂಟೆಗೆ ಹೋಗಲು ಸಮಯವಿದ್ದ ಕಾರಣ ತನ್ನ ಅಣ್ಣ ಮತ್ತು ಸ್ನೇಹಿತರೊಂದಿಗೆ ತಿಮ್ಮಸಂದ್ರ ಗೋಕುಲ್ ಕೆರೆಯಲ್ಲಿ ಈಜಾಡಲು ಹೋಗಿ ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದು, ಸಾರ್ವಜನಿಕರ ಸಹಕಾರದಿಂದ ಯುವಕನ ಮೃತ ದೇಹ ಹೊರ ತೆಗೆಯುವಷ್ಟರಲ್ಲಿ ಉಸಿರು ಕಟ್ಟಿ ಸಾವಿಗೀಡಾಗಿದ್ದ ಎನ್ನಲಾಗಿದೆ.
ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಸಿಪಿಐ ಅಭಿಷೇಕ್ ಮತ್ತು ಯೋಗೇಶ್ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈಜಲು ಹೋದ ಯುವಕ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು