ಬೆಂಗಳೂರು: ಸಾರ್ವಜನಿಕರಿಂದ ಫೋನ್ ಪೇ, ಗೂಗಲ್ ಪೇ ಹಾಗೂ ಬ್ಯಾಂಕ್ ಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ 12 ಮಂದಿ ಅಂತಾರಾಜ್ಯ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 400 ಮೊಬೈಲ್ ಸಿಮ್ಗಳು, 140 ಎಟಿಎಂ ಕಾರ್ಡ್ಗಳು, 17 ಚೆಕ್ ಪುಸ್ತಕಗಳು, 27 ಮೊಬೈಲ್ ಫೋನ್ ಗಳು, 22 ವಿವಿಧ ಬ್ಯಾಂಕ್ ಪಾಸ್ ಬುಕ್ ಗಳು, ಆದಾಯ ಮತ್ತು ಖರ್ಚು ವೆಚ್ಚಗಳನ್ನು ನಮೂದಿಸಿರುವ ಪುಸ್ತಕ ಮತ್ತು 15 ಸಾವಿರ ರೂ.ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್.ಆರ್. ನಗರದ ನಿವಾಸಿಯೊಬ್ಬರ ಮೊಬೈಲ್ ನಂಬರ್ ಗೆ ಕಳೆದ ತಿಂಗಳು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ವರ್ಕ್ರ್ಮ್ ಹೋಂ ಪ್ರಾಜೆಕ್ ಟ್ ಇರುವುದಾಗಿ ಮೆಸೇಜ್ ಕಳುಹಿಸಿ ಈ ಕೆಲಸ ಮುಗಿಸಿದ್ದಲ್ಲಿ ಕಮಿಷನ್ ಹಣ ನೀಡುವುದಾಗಿ ತಿಳಿಸಿದ್ದಾನೆ. ಈ ಮೆಸೇಜ್ ನಂಬಿ ಅವರು ಹೇಳಿದ ಕೆಲಸ ಮುಗಿಸಿದಾಗ, ಪ್ರಾಜೆಕ್ ಟ್ ವರ್ಕ್ ಕ್ರೆಡಿಟ್ ಸ್ಕೊರ್ ಬ್ಯಾಲೆನ್ ಸ್ ಶೀಟ್ ನೆಗೆಟಿವ್ ತೋರಿಸುವುದಾಗಿ ತಿಳಿಸಿ ಹಣ ಡ್ರಾ ಮಾಡಲು ಪ್ಲಾಟ್ ರ್ಮ್ನಲ್ಲಿ ರಿಜಿಸ್ಟರ್ ಮಾಡುವಂತೆ ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಅದರಂತೆ ರಿಜಿಸ್ಟರ್ ಮಾಡಿದ್ದು, 800 ರೂ. ಲಾಭದ ಹಣ ಖಾತೆಗೆ ಬಂದಿದೆ. ಈ ಪ್ರಕರಣದಲ್ಲಿ ತನಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ನೀಡಿದಲ್ಲಿ 18 ರಿಂದ 20 ಸಾವಿರ ಕಮಿಷನ್ ಹಣ ಪಡೆಯುತ್ತಿದ್ದುದ್ದಾಗಿ, ಲೋಕಲ್ ಬ್ಯಾಂಕ್ ಖಾತೆಯಾಗಿದ್ದಲ್ಲಿ 3 ಸಾವಿರ ರೂ. ಕಮಿಷನ್ ಪಡೆದುಕೊಂಡಿರುವುದಾಗಿ ತಿಳಿಸಿದ್ದಾನೆ. ತನಿಖೆ ಮುಂದುವರೆಸಿದ ಪೊಲೀಸರು, ಮುಂಬೈನಲ್ಲಿ ಕಮಿಷನ್ ಪಡೆಯುತ್ತಿದ್ದ ಆರೋಪಿಯೊಂದಿಗೆ ವಾರಾಣಸಿಯ ಪ್ರಯಾಗ್ ರಾಜ್ ಗೆ ತೆರಳಿ ಅಲ್ಲಿನ ಕಮಲಾನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಹತ್ತು ಮಂದಿಯನ್ನು ವಶಕ್ಕೆ.
ಮೋಸ ಮಾಡುತ್ತಿದ್ದ 12 ಮಂದಿ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು