ಶ್ರೀನಗರ: ಭಯೋತ್ಪಾದಕರು ಪಹಲ್ಗಾಮ್ ನಲ್ಲಿ ಅಮಾಯಕ ಜನರನ್ನು ಅವರ ಧರ್ಮ’ ಕೇಳುವ ಮೂಲಕ ಕೊಂದರು. ಅದರ ನಂತರ ಭಾರತಿಯ ಯೋಧರು ಭಯೋತ್ಪಾದಕರನ್ನು ಅವರ ಕರ್ಮಗಳನ್ನು ನೋಡಿ ಹೊಡೆದು ಹಾಕಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ
ಅಪರೇಷನ್ ಸಿಂಧೂರ ಯಶಸ್ವಿ ನಂತರ ಜಮ್ಮುಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿ ಯೋಧರಿಗೆ ಕೃತಜ್ಞತೆ ಸಲ್ಲಿಸಿ ಸೇನಾ ಕಚೇರಿಯಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿ, ಉಗ್ರರು ಅಮಾಯಕರನ್ನು ಅವರ ‘ಧರ್ಮ’ ನೋಡಿ ಕೊಂದರು, ಇದು ಪಾಕಿಸ್ತಾನದ ಕರ್ಮ’ವಾಗಿತ್ತು. ನಾವು ಅವರ ಕರ್ಮ’ ನೋಡಿ ಅವರನ್ನು ನಿರ್ಮೂಲನೆ ಮಾಡಿದ್ದೇವೆ, ಇದು ನಮ್ಮ ಭಾರತೀಯ ಧರ್ಮ’ವಾಗಿದೆ ಎಂದರು. ಪಹಲ್ಗಾಮ್ನಲ್ಲಿ ದಾಳಿ ಮಾಡಿದವರಿಗೆ ತಕ್ಕ ಶಾಸ್ತಿ ಆಗಿದೆ. ಪಾಕ್ ಗೆ ಹಾಗೂ ಉಗ್ರರಿಗೆ ಕಠಿಣ ಸಂದೇಶ ರವಾನೆಯಾಗಿದೆ. ಉಗ್ರರ ದಾಳಿಯನ್ನ ಇಡೀ ವಿಶ್ವವೇ ಖಂಡಿಸಿದೆ. ರತ ಶಾಂತಿ ಪ್ರಿಯ ದೇಶ ಎಂಬುದು ಜಗತ್ತಿಗೆ ಗೊತ್ತಿದೆ. ಆದರೆ ಭಾರತೀಯರ ತಂಟೆಗೆ ಬಂದರೆ ಶಿಕ್ಷೆ ಘೋರವಾಗಿರುತ್ತದೆ. ಮಣ್ಣಲ್ಲಿ ಹೂತು ಹಾಕುತ್ತೇವೆ. ಆಪರೇಷನ್ ‘ಸಿಂದೂರ್’ ಕೇವಲ ಹೆಸರಲ್ಲ, ಆಪರೇಷನ್ ‘ಸಿಂದೂರ್’ ಎಚ್ಚರಿಕೆಯ ಸಂದೇಶವಾಗಿದೆ,ದೇಶದ ಜನರ ಪರವಾಗಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಧರ್ಮ ನೋಡಿ ಕೊಂದರೆ, ಕರ್ಮ ನೋಡಿ ಉಡಾಯಿಸ್ತೀವಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು