ತುರುವೇಕೆರೆ: ಕಳೆದ ಒಂದೆರೆಡು ದಿನಗಳಿಂದ ಬರುತ್ತಿರುವ ಮಳೆ ಗಾಳಿಗೆ ತಾಲೂಕಿನ ನಾಗೇಗೌಡನ ಬ್ಯಾಲ (ಎನ್ ಜಿ ಬ್ಯಾಲ) ಗ್ರಾಮದಲ್ಲಿ ಮನೆಯೊಂದು ನೆಲ ಕಚ್ಚಿರುವ ಘಟನೆ ನಡೆದಿದೆ.
ನಾಗೇಗೌಡನ ಬ್ಯಾಲದ ಮುದ್ದಹನುಮಯ್ಯ ಎಂಬುವವರ ಮನೆ ಮಳೆ ಗಾಳಿಗೆ ಕುಸಿದು ಬಿದ್ದಿದೆ, ರಾತ್ರಿ ವೇಳೆ ಇದ್ದಕ್ಕಿದ್ದಂತೆ ಮಳೆ ಮತ್ತು ಸಣ್ಣ ಪ್ರಮಾಣದಲ್ಲಿ ಗಾಳಿ ಬಂದಿತು, ನೋಡ ನೋಡುತ್ತಿದ್ದಂತೆ ಮನೆಯ ಹೆಂಚು ದಿಢೀರನೆ ಕುಸಿದು ಬಿದ್ದವು, ಮನೆಯಲ್ಲಿದ್ದ ಧರ್ಮರಾಜು (45) ಎಂಬುವವರಿಗೆ ಬೆನ್ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಉಳಿದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು ಎಂದು ತಿಳಿದು ಬಂದಿದೆ.
ಮನೆಗಾಗಿ ತಳಪಾಯ ಹಾಕಿ ಮೂರ್ನಾಲ್ಕು ವರ್ಷಗಳೇ ಕಳೆದರೂ ಸಹ ಇದುವರೆಗೂ ಮಣಿಚೆಂಡೂರು ಗ್ರಾಮ ಪಂಚಾಯಿತಿಯಿಂದ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಕಾರ ನೀಡುತ್ತಿಲ್ಲ, ಮನೆ ನೀಡಿರೆಂದು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಲಕ್ಕಮ್ಮ ಅಳಲು ತೋಡಿಕೊಂಡಿದ್ದಾರೆ.
ಮನೆ ಇಲ್ಲದೇ ಪರದಾಡುತ್ತಿರುವ ಮುದ್ದಹನುಮಯ್ಯ ಕುಟುಂಬಕ್ಕೆ ಕೂಡಲೇ ಮನೆ ಕಟ್ಟಲು ಮಣಿಚೆಂಡೂರು ಗ್ರಾಮ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಮಾಡಬೇಕೆಂದು ದಲಿತ ಮುಖಂಡ ಅಪ್ಪಸಂದ್ರ ದಯಾನಂದ್ ಆಗ್ರಹಿಸಿದ್ದಾರೆ.
ಮಳೆ ಗಾಳಿಗೆ ನೆಲ ಕಚ್ಚಿದ ಮನೆ- ಕುಟುಂಬ ಕಂಗಾಲು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು