ಡೆಹ್ರಾಡೂನ್: ಕೇದಾರನಾಥ ಬಳಿ ಏರ್ ಆ್ಯಂಬುಲ್ಸ್ ಒಂದು ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡ ಘಟನೆ ನಡೆದಿದೆ.
ತುರ್ತು ವೈದ್ಯಕೀಯ ಸೇವೆಯ ಅಡಿಯಲ್ಲಿ ರೋಗಿಯನ್ನು ಕರೆದೊಯ್ಯಲು ಹೆಲಿಕಾಪ್ಟರ್ ಕೇದಾರನಾಥಕ್ಕೆ ಬರುವ ವೇಳೆ ಪತನಗೊಂಡಿದೆ, ಕೇದಾರನಾಥಕ್ಕೆ ಬರುತ್ತಿದ್ದ ಏರ್ ಆ್ಯಂಬುಲೆನ್ಸ್ ಕೇದಾರನಾಥ ಹೆಲಿಪ್ಯಾಡ್ ಬಳಿ ತಾಂತ್ರಿಕ ದೋಷ ಕಂಡು ಬಂದು ಇನ್ನೂ 20 ಮೀಟರ್ ದೂರದಲ್ಲಿರುವಾಗಲೇ ಹೆಲಿಕಾಪ್ಟರ್ನ ಹಿಂಭಾಗ ಮುರಿದು ಪತನಗೊಂಡಿದೆ, ಈ ವೇಳೆ ಹೆಲಿಕಾಪ್ಟರ್ ನಲ್ಲಿ ಪೈಲಟ್, ಓರ್ವ ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿ ಮೂರೂ ಮಂದಿ ಇದ್ದರು ಎಂದು ಹೇಳಲಾಗಿದ್ದು ಅದೃಷ್ಟವಶಾತ್ ಮೂವರು ಅಪಾಯದಿಂದ ಪಾರಾಗಿದ್ದಾರೆ.
ಏರ್ ಆ್ಯಂಬುಲೆನ್ಸ್ ಲ್ಯಾಂಡಿಂಗ್ ವೇಳೆ ಪತನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು