ನವದೆಹಲಿ: ಅಮೆರಿಕವು ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ನನ್ನು ಕೊಂದಿದ್ದಕ್ಕೂ ಹಾಗೂ ಪಹಲ್ಗಾಮ್ ಉಗ್ರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತ ಮಾಡಿದ ಅಪರೇಷನ್ ಸಿಂಧೂರ ಕಾರ್ಯಾಚರಣೆಗೂ ಬಹಳಷ್ಟು ಸಾಮ್ಯತೆಯಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧಿನಕರ್ ಹೇಳಿದರು.
ಅಮೆರಿಕವು, 9/11 ದಾಳಿಯ ನಂತರ ಆ ಘಟನೆಯ ಮಾಸ್ ಟ್ರ್ ಮೈಂಡ್ ನನ್ನು ಹುಡುಕಿಕೊಂಡು ಹೋಗಿ ಕೊಂದ ರೀತಿಯಲ್ಲೇ, ಪಹಲ್ಗಾಮ್ ಘಟನೆಯ ನಂತರ ಭಾರತವು ಪಾಕಿಸ್ತಾನದೊಳಕ್ಕೆ ನುಗ್ಗಿ ಉಗ್ರರ ಅಡಗು ತಾಣ ನಾಶಮಾಡಿದೆ ಎಂದರು.
ಜಗತ್ತಿಗೆ ತಿಳಿಯುವಂತೆ ಭಾರತವು ಪ್ರತೀಕಾರ ತೀರಿಸಿಕೊಂಡಿದೆ. ಶಾಂತಿ ಒಪ್ಪಂದದ ಜೊತೆಗೆ, ಭಯೋತ್ಪಾದನೆಯ ವಿರುದ್ಧ ಕೂಡ ದಾಳಿ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡವನ್ನು ಹುಟ್ಟುಹಾಕಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಪಾಕಿಸ್ತಾನದೊಳಗಿರುವ ಜೈಷ್-ಎ-ಮೊಹಮ್ಮದ್ ಹಾಗು ಲಷ್ಕರ್-ಎ-ತಯಬಾ (ಎಲ್ ಇಟಿ) ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಘಟನೆಯಲ್ಲಿ ಉಗ್ರಗಾಮಿಗಳು ಮಾತ್ರ ಮೃತರಾಗಿದ್ದಾರೆ ಎಂದರು.
ಪಹಲ್ಲಾಮ್ ಭಯೋತ್ಪಾದಕ ಕೃತ್ಯವು, ಮುಂಬೈ ಮೇಲಿನ ಉಗ್ರ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತಿದೊಡ್ಡ ಭಯೋತ್ಪಾದಕ ಕತ್ಯವಾಗಿದೆ ಎಂದರು.
ಲಾಡೆನ್ ಹತ್ಯೆ- ಸಿಂಧೂರ ಕಾರ್ಯಾಚರಣೆಗೆ ಸಾಮ್ಯತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು