ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಕರೀಕೆರೆ ಬೈರಾಪುರ, ಸಿದ್ದಾಪುರ ಗ್ರಾಮಗಳ ಕೆರೆ ಅಂಗಳ ಹಾಗೂ ತೋಟದ ಸಾಲುಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಸಂಚಾರ ಮಾಡಲು ಭಯಭೀತರಾಗಿದ್ದಾರೆ.
ಈಗಾಗಲೇ ಕೆರೆ ಅಂಗಳದಲ್ಲಿ ಮೇವು ಮೇಯುತ್ತಿದ್ದ ಕುರಿಯನ್ನು ಹೊತ್ತೊಯ್ದು ಅದನ್ನು ಕಂಡ ಕುರಿಗಾಹಿ ಗಾಬರಿಯಾಗಿದ್ದಾರೆ, ರಾತ್ರಿ ವೇಳೆಯಲ್ಲಿ ಭೈರಾಪುರ ಗ್ರಾಮದೊಳಗೆ ಸಂಚಾರ ಮಾಡಿರುವ ಚಿರತೆಯ ಹೆಜ್ಜೆಯ ಗುರುತು ಕಂಡು ಬಂದಿದ್ದು ಬೀದಿ ನಾಯಿಯನ್ನು ಎಳೆದೊಯ್ಯಿದೆ, ಬೆಳಗಿನ ವೇಳೆಯಲ್ಲಿ ಮಾರುಕಟ್ಟೆಗೆ ಹಾಗೂ ರೈಲು ಪ್ರಯಾಣ ಮಾಡಲು ತೆರಳಿದಾಗ ಗ್ರಾಮಸ್ಥರು ಪ್ರತ್ಯೇಕ್ಷವಾಗಿ ಕಂಡಿದ್ದಾರೆ, ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದು ಒಂದು ಬೋನ್ ವ್ಯವಸ್ಥೆ ಇಟ್ಟು ಸುಮ್ಮನಾಗಿದ್ದಾರೆ, ಕರೀಕೆರೆ ಹಾಗೂ ಬೈರಾಪುರ ಗ್ರಾಮದ ಕೆರೆ ಅಂಗಳದಲ್ಲಿ ಸಂಪೂರ್ಣವಾಗಿ ಗಿಡ ಗೆಂಟೆಗಳು ಬೆಳೆದಿದ್ದು ಕಾಡು ರೀತಿಯಲ್ಲಿ ಕೆರೆಯನ್ನು ಅವರಿಸಿದೆ, ಗಿಡ ಗೆಂಟೆ ತೆರವುಗೊಳಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಗ್ರಾಮಸ್ಥರು ಚಿರತೆ ಹಾವಳಿಯಿಂದ ಭಯಗೊಂಡಿದ್ದು ಮಳೆ ಸಂಭವಿಸುತ್ತಿರುವ ಸಂದಭರ್ದಲ್ಲಿ ವಿದ್ಯುತ್ ಸಹ ಕಣ್ಣಾಮುಚ್ಚಾಲೆ ಆಡುತ್ತಿರುವುದು ಮತ್ತಷ್ಟು ಆಂತಕಕ್ಕೆ ಕಾರಣವಾಗಿದೆ.
ಚಿರತೆ ಓಡಾಟ- ಹೆಜ್ಜೆ ಗುರುತು ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು