ಕುಣಿಗಲ್: ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ವರೆಗೂ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಳೆ ವ್ಯಾಪಕವಾಗಿ ಸುರಿದಿದ್ದು ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ಎಂಟುವರೆ ಯಾದರೂ ಮಳೆ ಸುರಿಯುತ್ತಿದ್ದ ಕಾರಣ ನಾಗರಿಕರು ಪರದಾಡುವಂತೆ ಅಗಿತ್ತು.
ಪಟ್ಟಣದಲ್ಲಿ ಭಾನುವಾರ ರಾತ್ರಿಯಿಂದ ಸುರಿದ ಮಳೆಗೆ ಪುರಸಭೆ ಬಸ್ ನಿಲ್ದಾಣ ಕೆರೆಯಂತಾಗಿದ್ದು ಬಸ್ನಿಲ್ದಾಣದಲ್ಲಿ ನಿಂತಿದ್ದ ಬಸ್ಸುಗಳು ಅರ್ದಷ್ಟು ಮಳೆ ನೀರಿನಲ್ಲಿ ಮುಳುಗಿ ಬಸ್ ಮಾಲೀಕರು ಪರದಾಡುವಂತಾಯಿತು, ಪುರಸಭೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಮುಖ್ಯ ಚರಂಡಿ ಸ್ವಚ್ಛ ಮಾಡದೆ ನಿರ್ಲಕ್ಯ ವಹಿಸಿದ್ದರಿಂದ ಈ ರೀತಿ ಆಯಿತೆಂದು ನಾಗರಿಕರು ಪುರಸಭೆಗೆ ಹಿಡಿಶಾಪ ಹಾಕಿದರು.
ಮಳೆ ಅಬ್ಬರಕ್ಕೆ ಕೊತ್ತಗೆರೆ ಹೋಬಳಿ ಚಿಕ್ಕಮಳಲವಾಡಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಬುಡ್ಡಯ್ಯ ಎಂಬುವರ 18*45 ಅಡಿಯಲ್ಲಿ ನಿರ್ಮಿಸಿದ್ದ ಕಚ್ಚಾ ಹೆಂಚಿನ ಮನೆ ಛಾವಣಿ ಸಮೇತ ನೆಲಕ್ಕೆ ಬಿದ್ದಿದ್ದು ಕಂದಾಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ, ತಾಲೂಕಿನ ವಿವಿಧೆಡೆಯಲ್ಲಿ ಮಳೆ ಅಬ್ಬರಿಸಿದ್ದು ಕುಣಿಗಲ್- 57.2, ಹುಲಿಯೂರು ದುರ್ಗ-32, ಮಾರ್ಕೋನ ಹಳ್ಳಿ- 49.1, ನಿಡಸಾಲೆ- 25.4, ಅಅಮೃತೂರು- 51.2,ಕೆ.ಹೆಚ್.ಹಳ್ಳಿ- 62.3 ಹಾಗೂ ಸಂತೇಪೇಟೆಯಲ್ಲಿ 40 ಮಿ.ಮೀ ಮಳೆಯಾಗಿದೆ.
ಮಳೆ ಅಬ್ಬರ- ನಾಗರಿಕರ ಪರದಾಟ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು