ಕುಣಿಗಲ್: ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡ ನಂತರ ಮದುವೆಯಾಗುವಂತೆ ಕೇಳಿದಾಗ ಜಾತಿ ನೆಪದಲ್ಲಿ ಮಹಿಳಾ ಪೇದೆಗೆ ಅನ್ಯಾಯ ಮಾಡಿದ ಘಟನೆ ಹಿನ್ನೆಲೆಯಲ್ಲಿ ಮಹಿಳಾ ಪೇದೆ ನೀಡಿದ ದೂರಿನ ಮೇರೆಗೆ ಪೇದೆ, ಮುಖ್ಯಪೇದೆ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ಭಾದಿತ ಮಹಿಳೆಯು ಪೇದೆಯಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅದೆ ಠಾಣೆಯಲ್ಲಿದ್ದ ಮತ್ತೋರ್ವ ಪುರುಷ ಪೇದೆ ಪದೇ ಪದೆ ಪೀಡಿಸಿ ಮದುವೆಯಾಗುವುದಾಗಿ ನಂಬಿಸಿ, ಮಹಿಳಾ ಪೇದೆಯನ್ನು ದೈಹಿಕವಾಗಿ ಬಳಸಿಕೊಂಡು ನಂತರ ಮಹಿಳಾ ಪೇದೆಗೆ ತಿಳಿಯದಂತೆ ಬೇರೆಡೆ ಮದುವೆಗೆ ನಿಶ್ವಿತಾರ್ಥ ಮಾಡಿಕೊಂಡಿದ್ದು ಇದನ್ನು ತಿಳಿದ ಮಹಿಳಾ ಪೇದೆ ನ್ಯಾಯಕ್ಕೆ ಆಗ್ರಹಿಸಿದಾಗ ನ್ಯಾಯ ಕೊಡಿಸುವುದಾಗಿ ಹೇಳಿ ರಾಜಿ ಮಾಡಿಸಿದ ಮುಖ್ಯ ಪೇದೆಯೆ ಮಹಿಳಾ ಪೇದೆಗೆ ಅನ್ಯಾಯ ಮಾಡಿದ್ದು, ಈ ಬಗ್ಗೆ ನೊಂದ ಮಹಿಳೆ ಪೇದೆ ಮದುವೆಯಾಗುವಂತೆ ಒತ್ತಾಯಿಸಿದಾಗ ಪುರುಷ ಪೇದೆ, ಮುಖ್ಯ ಪೇದೆ ಮಹಿಳಾ ಪೇದೆಯ ಜಾತಿ ನಿಂದಿಸಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾದಿತ ಮಹಿಳಾ ಪೇದೆ ನೀಡಿದ ದೂರಿನ ಮೇರೆಗೆ ಅಮೃತೂರು ಪೊಲೀಸ್ ಠಾಣೆಯ ಪೇದೆ ಬಸವರಾಯ ಬೀರಾದಾರ, ಮುಖ್ಯಪೇದೆ ನಾಗಭೂಷಣ್, ಮೇಲೆ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಮಹಿಳೆಗೆ ಅನ್ಯಾಯ- ಪೇದೆ ವಿರುದ್ಧ ದೂರು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು