ಕುಣಿಗಲ್: ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕೊತ್ತಗೆರೆ ಹೋಬಳಿಯ ಗುಡ್ಡದ ರಂಗನಾಥ ಸ್ವಾಮಿ ದೇವಾಲಯದ ಮೂರು ಹುಂಡಿಗಳನ್ನು ಹೊಡೆದು ಅದರಲ್ಲಿನ ನಗದು ಕಳವು ಮಾಡುವ ಜೊತೆಯಲ್ಲಿ ಸಿಸಿಟಿವಿ ಡಿವಿಆರ್ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
ದೇವಾಲಯವು ಮುಜರಾಯಿ ಇಲಾಖೆ ವಶದಲ್ಲಿರುವ ಕಾರಣ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ, ಸದರಿ ದೇವಾಲಯದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಅಷ್ಟೇ ಹುಂಡಿಗಳು ಮಾಡಲಾಗಿತ್ತು, ಪುನಃ ಹುಂಡಿ ಕಳವು ಆಗಿರುವುದು ಆಡಳಿತ ವ್ಯವಸ್ಥೆ ಲೋಪಕ್ಕೆ ಹಿಡಿದ ಕೈಕನ್ನಡಿಯಾಗಿದೆ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೆ ದೇವಾಲಯದ ಹುಂಡಿ ಕಳವಾಗುತ್ತಿರುವುದರಿಂದ ಆಡಳಿತಾಧಿಕಾರಿಗಳು ಅಗತ್ಯ ಕ್ರಮ ಜರುಗಿಸಿ ಮುಂದಿನ ದಿನಗಳಲ್ಲಿ ಯಾವುದೇ ಅವಘಡ ಸಂ‘ವಿಸದಂತೆ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುಣಿಗ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದು ಅಂದಾಜು 25,000 ಹುಂಡಿಹಣ ಕಳವಾಗಿರಬಹುದೆಂದು ದೂರಿನಲ್ಲಿ ನಮೂದಿಸಿದ್ದಾರೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಮೂರು ಹುಂಡಿಯಲ್ಲಿದ್ದ ನಗದು ಕಳವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು