
ಚಿಕ್ಕನಾಯಕನಹಳ್ಳಿ: ರಜೆ ಮುಗಿಸಿಕೊಂಡು ಶಾಲೆಗೆ ಹೋಗಬೇಕಾಗಿದ್ದ 13 ವರ್ಷದ ವಿದ್ಯಾರ್ಥಿ ಅಚುತ್ ಕುಮಾರ್ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ಪಟ್ಟಣದ ಬಿ.ಹೆಚ್.ರಸ್ತೆಯ ಅರಣ್ಯ ಇಲಾಖೆ ಸಮೀಪದ ಮನೆಯ ಮುಂಭಾಗದಲ್ಲಿ ಎಂದಿನಂತೆ ಆಟವಾಡುತ್ತಿದ್ದ ಅಚುತ್ ಕುಮಾರ್ ಗೆ ಮನೆ ಮುಂಭಾಗ ಹಾಕಿದ್ದ ಶೀಟ್ ಗೆ ವಿದ್ಯುತ್ ಸ್ಪರ್ಶಗೊಂಡು ಬಾಲಕನಿಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ, ಅಚುತ್ ಕುಮಾರ್ ಪಟ್ಟಣದ ಕೆ ಎಂ ಹೆಚ್ ಪಿ ಎಸ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದು ಬೇಸಿಗೆ ರಜೆ ಮುಗಿಸಿಕೊಂಡು ಗುರುವಾರದಿಂದ ಶಾಲೆಗೆ ಹೋಗಬೇಕಿತ್ತು, ಆದರೆ ಅಚುತ್ ಕುಮಾರ್ ವಿದ್ಯುತ್ ಶಾಕ್ ನಿಂದ ಸಾವನಪ್ಪಿದ್ದಾನೆ, ಬಾಲಕನ ತಂದೆ, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ, ತಾಲೂಕಿನಲ್ಲಿ ಒಂದು ತಿಂಗಳಲ್ಲಿ ಮೂವರು ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾರೆ.
ವಿದ್ಯುತ್ ಶಾಕ್- ಬಾಲಕ ಸ್ಥಳದಲ್ಲಿಯೇ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


