ಕುಣಿಗಲ್: ಬಸ್ಸಿನಲ್ಲಿ ಚಿನ್ನದ ವಡವೆಗಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಿಂದ 130 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಗಮ್ಮ ಎಂಬುವರು ಬೆಂಗಳೂರಿನಲ್ಲಿ ವಾಸವಿದ್ದು ಮೂಲ ಗ್ರಾಮ ತಾಲೂಕಿನ ಅಮೃತೂರು ಹೋಬಳಿಯ ಸಣಬ ದವರಾಗಿದ್ದಾರೆ, ಕೆಲ ದಿನಗಳ ಹಿಂದೆ ಇವರಿಗೆ ಹಾಗೂ ಸಂಬಂಧಿಗೆ ಸೇರಿದ 130 ಗ್ರಾಂ ಚಿನ್ನವನ್ನು ಅಮೃತೂರಿನ ಬ್ಯಾಂಕ್ ನಲ್ಲಿ ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಅಡವಿಟ್ಟಿದ್ದು ನಂತರ ಮೇ 19 ರಂದು ಬ್ಯಾಂಕ್ ಗೆ ಹಣ ಪಾವತಿಸಿ ವಡವೆಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡು ಕುಣಿಗಲ್ ಗೆ ಬಂದು ಕುಣಿಗಲ್ ನಿಂದ ಸರ್ಕಾರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಲು ಬಸ್ಸು ಹತ್ತುವ ಮುನ್ನ ವಡವೆ ಇರುವುದು ಖಚಿತ ಪಡಿಸಿಕೊಂಡಿದ್ದು ಬೆಂಗಳೂರಿಗೆ ಹೋಗಿ ನೋಡಿದಾಗ ವಡವೆಗಳು ಕಾಣೆಯಾಗಿದ್ದು ಕಾಣೆಯಾದ ವಡವೆಗಳ ಮೌಲ್ಯ 4.90 ಲಕ್ಷ ರೂ. ಆಗಿದ್ದು ವಡವೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚಿನ್ನದ ವಡವೆ ಕಳವು- ದೂರು ದಾಖಲು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು