ತುರುವೇಕೆರೆ: ದ್ವಿಚಕ್ರ ವಾಹನಕ್ಕೆ ಬುಲೆರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಕೇಬಲ್ ಆಪರೇಟರ್ ಓರ್ವರು ಸಾವಿಗೀಡಾಗಿರುವ ಘಟನೆ ನಡೆದಿದೆ.
ಕೊಡಗೀಹಳ್ಳಿ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಹುಲಿಕಲ್ ನ ಕೇಬಲ್ ಆಪರೇಟರ್ ಕರುಣಾನಿಧಿ (50) ಅವರಿಗೆ ಬುಲೆರೋ ಜೀಪ್ ಡಿಕ್ಕಿ ಹೊಡೆದಿದೆ, ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಕರುಣಾನಿಧಿಯವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಮಂಗಳವಾರವೇ ದಾಖಲಿಸಲಾಯಿತು. ಚಿಕಿತ್ಸೆ ಲಕಾರಿಯಾಗದೆ ಕರುಣಾನಿಧಿ ಬುಧವಾರ ಕೊನೆಯುಸಿರೆಳೆದರು.
ಮರಣೋತ್ತರ ಪರೀಕ್ಷೆಯ ತರುವಾಯ ಗುರುವಾರ ಕರುಣಾನಿಧಿಯವರ ಪಾರ್ಥಿವ ಶರೀರವನ್ನು ಹುಲಿಕಲ್ ಗ್ರಾಮಕ್ಕೆ ತರಲಾಯಿತು, ಹಲವಾರು ಮಂದಿ ಪಾರ್ಥೀವ ಶರೀರದ ದರ್ಶನ ಪಡೆದ ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಕರುಣಾನಿಧಿ ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಅಪಘಾತದಲ್ಲಿ ಕೇಬಲ್ ಆಪರೇಟರ್ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು