ತುಮಕೂರು: ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿ ಬಿಳಿದೇವಾಲಯದಿಂದ ಆಲಪ್ಪನಗುಡ್ಡೆ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ರೇಷ್ಮೆ ರಂ ಕಾಂಪೌಂಡ್ ಬಳಿ ಮೇ 8ರಂದು ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು 5.6 ಅಡಿ ಎತ್ತರವಿದ್ದು, ಮೃತ ದೇಹವು ಕೊಳೆತು ಹುಳು ಬಿದ್ದಿರುತ್ತದೆ. ಮೃತನ ಮೈಮೇಲೆ ಬಿಳಿ ಬಣ್ಣದ ಹೂವಿನ ಚಿತ್ರವಿರುವ ಮಾಸಲಾದ ರೆಡಿಮೇಡ್ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟು ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.08132- 220229, 0816- 2272451ನ್ನು ಸಂಪರ್ಕಿಸಬಹುದೆಂದು ಪೊಲೀಸ್ ಸಬ್ ಇನ್ ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಅಪರಿಚಿತ ಶವ ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು