ಹೃದಯಘಾತಕ್ಕೆ ಯುವತಿ ಸಾವು

ದಾವಣಗೆರೆ: ಹೃದಯಘಾತಕ್ಕೆ ಒಳಗಾಗಿ ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಎಸ್.ಎಸ್. ಹೈಟೆಕ್ ರಸ್ತೆಯ ಸಾಯಿ ಬಾಬ ದೇವಸ್ಥಾನದ ಸಮೀಪದ ವಾಸಿ ತಿಪ್ಪೇಸ್ವಾಮಿ ಮತ್ತು ಆಶಾ ದಂಪತಿ ಪುತ್ರಿ ಗೌರಿ (19) ಹೃದಯಘಾತ ಸಂಭವಿಸಿ ಮೃತಪಟ್ಟ ದುರ್ದೈವಿ. ನಗರದ ಚಾಣಕ್ಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿ ಎಂಜಿನಿಯರಿಂಗ್ ಸೇರಲು ಸಿಇಟಿ ಕೌನ್ಸಿಲಿಂಗ್ಗೆ ಕಾಯುತ್ತಿದ್ದರು. ಗೌರಿ ಮನೆಯುಲ್ಲಿ ಇದ್ದಾಗ ತಲೆ ಸುತ್ತು ಕಾಣಿಸಿಕೊಂಡಿದೆ. ಈ ವೇಳೆ ದಿಢೀರ್ ಕುಸಿದು ಸಾವು ಕಂಡಿದ್ದಾರೆ.

5 ಹುಲಿ ಸಾವು- ಆರೋಪಿಗಳಿಗೆ 4 ದಿನ ವಿಚಾರಣೆ

ಹನೂರು: ವಿಷವಿಕ್ಕಿ 5 ಹುಲಿಗಳ ಸಾವಿಗೆ ಕಾರಣರಾದ ಮೂವರು ಆರೋಪಿಗಳಿಗೆ 4 ದಿನಗಳ ಕಾಲ ವಿಚಾರಣೆಗೆ ಹನೂರು ಪಟ್ಟಣದಲ್ಲಿರುವ ಅಪರ ಸಿವಿಲ್ ನ್ಯಾಯಧೀಶರು ಆದೇಶಿಸಿದರು. ನ್ಯಾಯಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಾದ ಮಾಧುರಾಜ್, ನಾಗರಾಜು, ಕೋನಪ್ಪ ಅವರನ್ನು ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ಎಸಿಎಫ್ ಗಜಾನನ ಅವರು ಮನವಿ ಮಾಡಿದರು.ಈ ವೇಳೆ ನ್ಯಾಯಧೀಶರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ವಕೀಲರು ಇದ್ದಾರೆಯೆಂದು ಪ್ರಶ್ನಿಸಿದರು. ಇಲ್ಲ ಎಂದು ತಿಳಿದಾಗ ವಕೀಲರನ್ನು ನೇಮಿಸಿಕೊಂಡು ಬರಲು … Read more

ಮೆಮು ರೈಲಿನಲ್ಲಿ ತಾಂತ್ರಿಕ ದೋಷ

ತುಮಕೂರು: ತುಮಕೂರು-ಯಶವಂತಪುರ ಮೆಮು ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ರೈಲ್ವೇ ಅಧಿಕಾರಿಗಳು ರೈಲು ರದ್ದತಿಗೆ ತಡವಾಗಿ ಘೋಷಿಸಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಘಟನೆ.8.45 ಕ್ಕೆ ತುಮಕೂರಿನಿಂದ ಹೊರಡಬೇಕಿದ್ದ ರೈಲು.9.25 ಕ್ಕೆ ರೈಲು ರದ್ದಾಗಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತ ಪಡಿಸಿ ರೈಲ್ವೇ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೆಬ್ಬೂರಿನಲ್ಲಿ ಹೆಚ್ಚಾದ ಕಳ್ಳರ ಹಾವಳಿ

ತುಮಕೂರು: ಹೆಬ್ಬೂರು ಪೊಲೀಸ್ ಠಾಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್ ಆಗಿದ್ದು ಗ್ರಾಮಸ್ಥರ ನಿದ್ದೆ ಗೆಡೆಸಿದೆ. ಮುಸುಕು ಧರಿಸಿಕೊಂಡು ಕಳ್ಳತನಕ್ಕೆ ಇಳಿದ ಗ್ಯಾಂಗ್ ಈ ಮುಸುಕುದಾರಿಗಳ ಸಂಚಲನ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಹೆಚ್ಚುತ್ತಿರುವ ಕಳ್ಳರ ಸಂಚಲನ ಗೊತ್ತಿದ್ದರೂ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಎರಡು ಕಳ್ಳತನ ಪ್ರಕರಣ ದಾಖಲಾಗಿತ್ತು ಕಳ್ಳರ ಸಂಚಲದ ದೃಶ್ಯ ಕಂಡು ಸಾರ್ವಜನಿಕರು ಗಾಬರಿಗೊಂಡ್ಡಿದ್ದಾರೆ.

ಕಾರು ಅಪಘಾತ ನಾಲ್ವರ ಸಾವು

ತುಮಕೂರು : ಕುಣಿಗಲ್ ಬೈಪಾಸ್ನಲ್ಲಿ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಣಿಗಲ್ ಬೈಪಾಸ್ ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಘಟನೆ ನಡೆದಿದ್ದು ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್ ನ ಒಂದೇ ಕುಟುಂಬ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯೂ ಟರ್ನ್ ತೆಗೆದುಕೊಳ್ಳುವಾಗ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲಿದ್ದ ಕುಟುಂಬದ ಗಂಡ, ಹೆಂಡತಿ, ಮಗ, ಮಗಳು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ಪರಿಶೀಲನೆ … Read more

ಇಲಾಖೆಗಳಲ್ಲಿ ಕನ್ನಡ ಕಡ್ಡಾಯ- ಸುತ್ತೋಲೆ

ಬೆಂಗಳೂರು: ಎಲ್ಲಾ ಇಲಾಖೆಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕನ್ನಡ ಕಡ್ಡಾಯವಾಗಿ ಬಳಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಎಲ್ಲಾ ಇಲಾಖೆಯ ಕಚೇರಿಯ ನಾಮಲಕಗಳು, ದಾಖಲೆಗಳು ಕನ್ನಡದಲ್ಲಿಯೇ ಇರಬೇಕು. ಅರ್ಜಿ, ಪತ್ರಗಳಿಗೂ ಕನ್ನಡದಲ್ಲಿಯೇ ಉತ್ತರ ನೀಡಬೇಕು.ವಿಧಾನಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಭಾಷಾ ನೀತಿಯನ್ನು ಜಾರಿಗೊಳಿಸುವುದು ಅಧಿಕಾರಿಗಳು ಹಾಗೂ ನೌಕರರ ಕರ್ತವ್ಯ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು, ನೌಕರರು ಕಟ್ಟುನಿಟ್ಟಿನಲ್ಲಿ ನಿಯಮ ಪಾಲಿಸಬೇಕು … Read more

ಒಂದೇ ಕಾಮಗಾರಿಗೆ ಎರಡು ಬಿಲ್- ಜಮೀರ್ ವಿರುದ್ಧ ದೂರು

ಬೆಂಗಳೂರು: ವಸತಿ ಇಲಾಖೆಯಲ್ಲಿ ನಡೆದಿರುವ ಬ್ರಹ್ಮಾಟಡ ಭ್ರಷ್ಟಾಚಾರ ಹಸಿಯಾಗಿರುವ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಾಮರಾಜಪೇಟೆಯಲ್ಲಿ ನಡೆದಿರುವ ಕಾಮಗರಿಗೆ ಎರಡೆರೆಡು ಬಾರಿ ಬಿಲ್ ಪಾವತಿಯಾಗಿರೋ ಬಗ್ಗೆ ಬಿಜೆಪಿ ನಾಯಕ ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಪ್ರತಿನಿಧಿಸುತ್ತಿರುವ ಚಾಮರಾಜಪೇಟೆಯಲ್ಲಿ ಯಾವುದೇ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಅಂದರೆ 55 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿಸಿಕೊಂಡಿರುವ ವಂಚನೆ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.2020 ರಿಂದ 2022 … Read more

ಪ್ರವಾಹದಿಂದ ಮರವೇರಿದ ಅಪ್ಪ- ಮಗ

ಮೈಸೂರು: ಜಾನುವಾರು ಮೇಯಿಸಲು ಹೋಗಿದ್ದ ತಂದೆ-ಮಗ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಮರವೇರಿ ಕುಳಿತು ರಕ್ಷಿಸಿಕೊಂಡಿರುವ ಘಟನೆ ಬನ್ನೂರು ಬಳಿಯ ಮಾಕನಹಳ್ಳಿಯಲ್ಲಿ ನಡೆದಿದೆ. ಮಾಕನಹಳ್ಳಿ ಗ್ರಾಮದ ಕೃಷ್ಣಗೌಡ ಮತ್ತು ಅವರ ಮಗ ಪ್ರವೀಣ್ ಜಾನೂವಾರು ಮೇಯಿಸಲೆಂದು ಮೊನ್ನೆ ಕಾವೇರಿ ನದಿಯ ಮತ್ತೊಂದು ಡದದಲ್ಲಿನ ದೇವಿ ತೋಪಿಗೆ ಹೋಗಿದ್ದರು. ಸಂಜೆ ಅಲ್ಲಿಂದ ಹಿಂದಿರುಗಬೇಕು ಎನ್ನುವಷ್ಟರಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನದಿಯನ್ನು ದಾಟಿ ಬರು ಸಾಧ್ಯವಾಗಿಲ್ಲ. ಪ್ರವಾಹೋಪಾದಿಯಲ್ಲಿ ನೀರು ಸ್ಥಳವನ್ನು ಆವರಿಸಿಕೊಳ್ಳುತ್ತಿದ್ದಂತೆ ಬೇರೆ … Read more

ಹೆದ್ದಾರಿಗೆ ಮಾವು ಸುರಿದು ರೈತರ ಪ್ರತಿಭಟನೆ

ಕೋಲಾರ: ಮಾವಿನಬೆಲೆ ಪಾತಾಳಕ್ಕೆ ಕುಸಿದಿದ್ದು, ಔಷಧಿ ಇದ್ದರೂ ಸಹ ಸರ್ಕಾರ ಯಾವುದೇ ಗಮನಹರಿಸದೆ ನಿರ್ಲಕ್ಷವಹಿಸಿದೆ ಎಂದು ಆರೋಪಿಸಿ ಕೋಲಾರದಲ್ಲಿ ಮಂಗಳವಾರ ರೈತ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವು ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೊಂಡರಾಜನಹಳ್ಳಿ ಗೇಟ್ ಬಳಿ 3-4 ಟ್ರ್ಯಾಕ್ಟರ್ ಲೋಡ್ ಮಾವಿನ ಕಾಯಿಗಳನ್ನು ಸುರಿದು ಆಕ್ರೋಶ ವ್ಯಕ್ತಪಡಿಸಲಾಯಿತು. ತೋತಾಪುರಿ ಮಾವಿನ ಹಣ್ಣಿನ ಬೆಲೆ ಸಂಪೂರ್ಣ ಪಾತಾಳಕ್ಕೆ ಇಳಿದಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ 15 ದಿನಗಳ ಹಿಂದೆಯೇ ಪ್ರತಿ ಕೆಜಿಗೆ 4 … Read more

ಮಾರಕಾಸ್ತ್ರಗಳಿಂದ ಕೊಚ್ಚಿ ಶಿವು ಕೊಲೆ

ಹಾವೇರಿ: ಮಟ ಮಟ ಮಧ್ಯಾಹ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಗುತ್ತಿಗೆದಾರ ಶಿವು ಕುನ್ನೂರು ಎಂಬುವವರನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಸುಮಾರು ಎಂಟರಿಂದ ಹತ್ತು ಜನರ ತಂಡ ಕಾರಿನಲ್ಲಿ ಬಂದು ಹೋಂಡಾ ಶೋ ರೂಂ ಬಳಿ ನಿಂತಿದ್ದ ಕಾಂಗ್ರೆಸ್ ಮುಖಂಡ ಶಿವಾನಂದ ಕುನ್ನೂರ ಅವರ ಮೇಲೆ ಏಕಾಏಕಿ ದಾಳಿ ಮಾಡುವ ಮೂಲಕ ಕೊಲೆಗೈದು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡು ಶಿವು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.