ತುಮಕೂರು: ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿ ಬಟವಾಡಿ ಬಳಿ ಇರುವ ಅಕ್ಕ ತಂಗಿ ಕೆರೆಯಲ್ಲಿ ಮೇ 30ರಂದು ಅಪರಿಚಿತ ವ್ಯಕ್ತಿಯ ಶವವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು ಸುಮಾರು 65 ವರ್ಷ ವಯಸ್ಸು 163 ಸೆಂ.ಮೀ. ಎತ್ತರವಿದ್ದು, ಮೃತ ದೇಹವು ಚಹರೆ ಗುರುತಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಮೃತನ ಮೈಮೇಲೆ ಗಾಢ ನೀಲಿ ಬಣ್ಣದ ಫುಲ್ ಓವರ್, ನೇರಳೆ ಬಣ್ಣದ ಅ‘ರ್ ತೋಳಿನ ಅಂಗಿ, ಕಪ್ಪು ಬಣ್ಣದ ಬನಿಯನ್, ಕಪ್ಪು ಬಣ್ಣದ ಬರ್ಮುಡಾ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.0816- 2278224, 2272451 ಅಥವಾ ಮೊ.9480802951, 32, 00ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು