ಮಧುಗಿರಿ: ಸದಾ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣ ನೇಣಿಗೆ ಶರಣಾಗಿರುವ ಘಟನೆ ಮಧುಗಿರಿಯಲ್ಲಿ ನದೆದಿದೆ.
ಮಧುಗಿರಿ ಪಟ್ಟಣದ ಕಪ್ಪಣ್ಣನ ಬೀದಿಯ ವಾಸಿಯಾದ ಸತೀಶ್ ಕುಮಾರ್ ಹಾಗೂ ಲಕ್ಷ್ಮೀ ದಂಪತಿ ಮಗ ಅಕ್ಷಯ್(19) ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೊದಲ ಬಾರಿಗೆ 4 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ ಅಕ್ಷಯ್ ಮರು ಪರೀಕ್ಷೆಯಲ್ಲಿ 2 ವಿಷಯದಲ್ಲಿ ಪಾಸಾಗಿದ್ದು ಮತ್ತೆ ಇನ್ನೂ 2 ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ, ಅಲ್ಲದೆ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ
ಬಾಲಕನಿಗೆ ಮೂರ್ಚೆ ರೋಗ (ಫಿಡ್ ಸ್ ) ಬರುತ್ತಿದ್ದು ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಸೋಮವಾರ ತಂದೆ ಜಮೀನಿಗೆ ಹೋಗಿದ್ದು, ತಾಯಿ ಬಾಲ್ಯಾ ಗ್ರಾಪಂನಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ಹೋಗಿದ್ದರು.
ಮೃತ ಬಾಲಕ ಅಕ್ಷಯ್ ಹೆತ್ತವರಿಗೆ ಒಬ್ಬನೇ ಮಗನಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಕರಣ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
ಪರೀಕ್ಷೆಯಲ್ಲಿ ಫೆಲ್: ಬಾಲಕ ನೇಣಿಗೆ ಶರಣು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು