ಕುಣಿಗಲ್: ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲು ತುಳಿತಕ್ಕೆ ಒಳಗಾಗಿ ತಾಲೂಕಿನ ನಾಗಸಂದ್ರದ ಹಾಲಿ ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದ ಮನೋಜ್ (24) ಮೃತಪಟ್ಟಿದ್ದು, ಸ್ವಗ್ರಾಮದಲ್ಲಿ ಗುರುವಾರ ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೃತ ಮನೋಜ್ (24) ಬೆಂಗಳೂರಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ, ತಂದೆ ದೇವರಾಜ್ ಪಾನಿಪೂರಿ ವ್ಯವಹಾರ ಮಾಡುತ್ತಿದ್ದರು, ಬುಧವಾರ ಸಂಜೆ ಪೊಲೀಸರು ಮಾಹಿತಿ ನೀಡಿದ್ದು ಆಸ್ಪತ್ರೆಗೆ ತೆರಳಿದಾಗ ಬೆಳಗ್ಗೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಒಬ್ಬನೆ ಮಗ ಹೆಣವಾಗಿದ್ದ, ಮಗನ ಸಾವನ್ನು ಅರಗಿಸಿಕೊಳ್ಳಲಾಗದೆ ಮೃತನ ತಾಯಿ, ತಂದೆ ಸಂಬಂಧಿಕರ ರೋದನೆ ಮುಗಿಲು ಮುಟ್ಟಿತ್ತು.
ಮೃತನ ಚಿಕ್ಕಪ್ಪ ತಿಮ್ಮೇಗೌಡ ಮಾತನಾಡಿ, ಈ ಸಾವಿಗೆ ಸರ್ಕಾರವೇ ನೇರಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿ, ಲಕ್ಷಾಂತರ ಮಂದಿ ಸೇರುತ್ತಾರೆ ಎಂದು ಗೊತ್ತಿದ್ದರೂ ಅಗತ್ಯ ಭದ್ರತೆ ಕ್ರಮಕೈಗೊಂಡಿರಲಿಲ್ಲ, ವಿಐಪಿ ಮಕ್ಕಳಿಗೆ ರಕ್ಷಣೆ ಸಿಕ್ಕಿತು, ಅಮಾಯಕ, ಮುಗ್ದ ಸಾರ್ವಜನಿಕರ ಮಕ್ಕಳು ಬೀದಿ ಹೆಣ ವಾಗುವಂತಾಯಿತು, ಸರ್ಕಾರದ ಕ್ರಮ ಖಂಡನೀಯ ಎಂದರು.
ಶಾಸಕ ಡಾ.ರಂಗನಾಥ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸ್ವಗ್ರಾಮದಲ್ಲಿ ಮನೋಜ್ ಅಂತ್ಯಕ್ರಿಯೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು