ಪಟ್ಟನಾಯಕನ ಹಳ್ಳಿ: ಸಾಲ ಭಾದೆ, ಜಿಗುಪ್ಸೆಗೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಾ ತಾಲೂಕಿನ ಬಂದ ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತ ಜಯರಾಮಯ್ಯ (68) ಎನ್ನಲಾಗಿದೆ. ಪಿಎಲ್ ಡಿ ಬ್ಯಾಂಕ್ ನಲ್ಲಿ 50 ಸಾವಿರ ರೂಪಾಯಿ ಸಾಲ ಮಾಡಿದ್ದು, ಬ್ಯಾಂಕ್ ನವರು ಒತ್ತಡ ಮಾಡುತ್ತಿದ್ದ ಕಾರಣ ಬೇರೆಯವರ ಹತ್ತಿರ ಕೈ ಸಾಲ ಮಾಡಿ ಇತ್ತೀಚೆಗೆ ಕಟ್ಟಿದ್ದರು, 2 ಎಕರೆ ಜಮೀನಿನಲ್ಲಿ ಇದ್ದ ತೋಟ ನೀರಿಲ್ಲದೆ ಒಣಗಿದ ಕಾರಣ ಸಾಲ ಭಾದೆ ಜೊತೆಗೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ರೈತ ಜಯರಾಮಯ್ಯಗೆ ಒಂದು ಹೆಣ್ಣು, ಇಬ್ಬರೂ ಗಂಡು ಮಕ್ಕಳಿದ್ದಾರೆ, ಪಟ್ಟನಾಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂತ್ವನ ಸಾಲಬಾಧೆಯಿಂದ ಆತ್ಮಕ್ಕೆ ಮಾಡಿಕೊಂಡ ಜಯರಾಮಯ್ಯ ಕುಟುಂಬಸ್ಥರನ್ನು ಭೇಟಿ ಮಾಡಿದ ಜೆಡಿಎಸ್ ಹಿರಿಯ ಮುಖಂಡ ಆರ್.ಉಗ್ರೇಶ್ ಸಾಂತ್ವನ ಹೇಳಿದರು.
ಸಾಲ ಭಾದೆ- ರೈತ ಆತ್ಮಹತ್ಯೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು