ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿ ಮಂದರಗಿರಿ ಲೇಔಟ್ ನ ಸರ್ಕಾರಿ ಹಳ್ಳದ ಕಾಡು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಜೂನ್ 9ರಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು 5.7 ಅಡಿ ಎತ್ತರ, ದೃಢಕಾಯ ಶರೀರ, ದುಂಡು ಮುಖ ಹೊಂದಿದ್ದು, ದೇಹವು ಕೊಳೆತು ಹೋಗಿರುತ್ತದೆ. ಮೈಮೇಲೆ ನೀಲಿ ಬಣ್ಣದ ಪ್ಯಾಂಟ್ ಹಾಗೂ ಖಾಕಿ ಬಣ್ಣದ ಟೀ ಷರ್ಟ್ ಇದ್ದು, ಎಡಗೈಯಲ್ಲಿ ವಾಚ್ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.0816- 2281124, 2278000, 2281120ಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಅಪರಿಚಿತ ಶವ ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು