ಅಹಮದಾಬಾದ್: ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಏರ್ ಇಂಡಿಯಾ ವಿಮಾನ ‘ಎಐ-171’ ಪತನವಾಗಿದೆ.
ಅಹಮದಾಬಾದ್ ನಿಂದ ಮಧ್ಯಾಹ್ನ ಸುಮಾರು 1.30 ಕ್ಕೆ ಹೊರಟ ವಿಮಾನವು ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಈ ಪೈಕಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆ ವಿಮಾನದಲ್ಲಿದ್ದರು.
242 ಪ್ರಯಾಣಿಕರಿದ್ದ ವಿಮಾನ ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿನಗರ ಪ್ರದೇಶದಲ್ಲಿ ಪತನವಾಗಿದೆ ಎಂದು ಪೊಲೀಸರು ಸಹ ದೃಢಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ವಿಮಾನವು ಏರ್ ಇಂಡಿಯಾ ವಿಮಾನವಾಗಿದ್ದು, 242 ಪ್ರಯಾಣಿಕರನ್ನು ಹೊತ್ತು ಲಂಡನ್ ಕಡೆ ತೆರಳುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ವಿಮಾನ ಪತನದ ನಂತರ ಭಾರೀ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರವಾಗಿ ಶ್ರಮಿಸಿತಾದರೂ ಬೆಂಕಿಯ ಕೆನ್ನಾಲಗೆ ಅಗ್ನಿಶಾಮಕ ದಳದ ಸಬ್ಬಂದಿಗೂ ಬಿಸಿ ಮುಟ್ಟಿತು ಎಂದು ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ.
ವಿಮಾನ ಅಪಘಾತ ದೃಢಪಡಿಸಿದ ಏರ್ ಇಂಡಿಯಾ: ಅಹಮದಾಬಾದ್ನಿಂದ ಲಂಡನ್ ಗ್ಯಾಟ್ವಿಕ್ ಗೆ ತೆರಳುತ್ತಿದ್ದ ಎಐ-171 ವಿಮಾನ ಟೇಕ್ ಆಫ್ ಆದ ನಂತರ ಅಪಘಾತಕ್ಕೀಡಾಗಿದೆ ಎಂದು ಏರ್ ಇಂಡಿಯಾ ದೃಢಪಡಿಸಿದೆ. ಅಹಮದಾಬಾದ್ ನಿಂದ ಮಧ್ಯಾಹ್ನ 3-38 ಕ್ಕೆ ಹೊರಟ ವಿಮಾನವು ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಈ ಪೈಕಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆ ವಿಮಾನದಲ್ಲಿದ್ದರು. ಇನ್ನೂ ಕರ್ನಾಟಕದ ಸಹ ಪೈಲೆಟ್ ಕೂಡ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತಾದರೂ ಯಾರೂ ಜೀವಂತವಾಗಿ ಉಳಿಯಲಿಲ್ಲ ಎಂದು ವರದಿಯಾಗಿದೆ.
ಟ್ಯಾಂಕರ್ ನಲ್ಲಿ 58 ಸಾವಿರ ಲೀಟರ್ ಇಂಧನ ಇದ್ದಿದ್ದರಿಂದ ಭೂಮಿಗೆ ಅಪ್ಪಳಿಸುತ್ತಿದ್ದಂತೆ ಇಂಧನದ ಟ್ಯಾಂಕ್ ಸ್ಪೋಟಗೊಂಡು ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿದಿದೆ, ಅಪ್ಪಳಿಸಿದ ರಬಸಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಏರ್ ಇಂಡಿಯಾ ಪತನ- ಘೋರ ದುರಂತ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು