ಬೆಂಗಳೂರು: ನಗರದ ಹೊರವಲಯದ ಆನೇಕಲ್ ಬಳಿ ಮನೆಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ 11 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ಬಾಲಕಿಯನ್ನು ನಾರಾಯಣಘಟ್ಟದ ಖಾಸಗಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ತನಿಷ್ಕಾ ಎಸ್. ಎಂದು ಗುರುತಿಸಲಾಗಿದೆ. ಮಂಗಳವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಬಾಲಕಿ ತನ್ನ ಮನೆಯ ಹೊರಗೆ ಚೆಂಡಿನಿಂದ ಆಟವಾಡುತ್ತಿದ್ದಾಗ, ಮನೆ ಮುಂದೆ ಇದ್ದ ವಿದ್ಯುತ್ ಕಂಬದ ಬಳಿಗೆ ಚೆಂಡು ಹೋಗಿದೆ. ಅದನ್ನು ತೆಗೆದುಕೊಳ್ಳಲು ಕಂಬದ ಬಳಿ ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಕುಸಿದು ಬಿದ್ದಿದ್ದಾಳೆ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಎಫ್ ಎಸ್ ಎಲ್ ತಂಡವು ಪರಿಶೀಲನೆಯ ನಂತರ ಸಲ್ಲಿಸುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ವಿದ್ಯುತ್ ಶಾಕ್ ಗೆ ಬಾಲಕಿ ಬಲಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು