ಕಲಬುರಗಿ: ನಗರದ 3ನೇ ಹೆಚ್ಚುವರಿ ಸಿನಿಯರ್ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ ಮುಗುತಿ ಅವರು (44) ಸೋಮವಾರ ಬೆಳಗ್ಗೆ ಹೃದಯಾಪಘಾತದಿಂದ ನಿಧನರಾಗಿದ್ದಾರೆ.
ಮನೆಯಲ್ಲಿರಬೇಕಾದರೆ ಬೆಳಗ್ಗೆ 9.45ಕ್ಕೆ ತಿಂಡಿ ಮುಗಿಸಿ, ಹೊರಬೇಕೆನ್ನುವಷ್ಟರಲ್ಲಿ ಎದೆ ನೋವು ಕಾಣಿಸಿಕೊಂಡಾಗಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿದ ಸಂದರ್ಭಲ್ಲಿ ಅಲ್ಲಿನ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ರಬಕವಿ, ಬನಹಟ್ಟಿ ಮೂಲದ ಇವರು ಕಳೆದ 15 ದಿನಗಳ ಹಿಂದೆ ಕಲಬುರಗಿಗೆ ವರ್ಗವಾಗಿದ್ದರು. ಈ ಮುಂಚೆ ದಾವಣಗೇರೆ ಜಿಲ್ಲಾ ನ್ಯಾಯಾಲದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು. ವಿಶ್ವನಾಥ ಮುಗುತಿ ಹೆಂಡತಿ ಮತ್ತು 4 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ನ್ಯಾಯಾಲಯದ ಆವರಣ ಹಾಲ್ ನಲ್ಲಿ ಈ ಘಟನೆ ನಡೆದಿಲ್ಲವೆಂದು ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ಪಸಾರ ಸ್ಪಷ್ಟಪಡಿಸಿದ್ದಾರೆ.
ವಕೀಲರ ಮತ್ತು ಸಾರ್ವಜನಿಕರ ದರ್ಶನಕ್ಕೆ ಮೃತರ ಶವ ಕೋರ್ಟ್ ಆವರಣದಲ್ಲಿ ಇರಿಸಿದ ಬಳಿಕ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿತ್ತು.
ಹೃದಯಾಘಾತದಿಂದ ಕಲಬುರಗಿ ನ್ಯಾಯಾಧೀಶ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು