ಕುಣಿಗಲ್: ಚಿರತೆಗೆ ಗುಂಡಿಕ್ಕಿ ಕೊಂದ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ವಡಾಘಟ್ಟ ಗ್ರಾಮದ ಬಳಿ ನಡೆದಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಆರ್ ಎಫ್ ಒ ಜಗದೀಶ್ ಮತ್ತು ಸಿಬ್ಬಂದಿ ಕೃತ್ಯದಲ್ಲಿ ಪಾಲ್ಗೊಂಡಿದ್ದ ಮೂವರ ಪೈಕಿ ನಾರಾಯಣ ಎಂಬಾತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗುಂಡಿಗೆ ಬಲಿಯಾದ ಚಿರತೆ ನಾಲ್ಕು ವರ್ಷದ ಗಂಡು ಚಿರತೆಯಾಗಿದ್ದು ನಿಯಮಾನುಸಾರ ನ್ಯಾಯಾಲಯದ ಆದೇಶದಂತೆ ಚಿರತೆ ಕಳೆ ಬರಹವನ್ನು ಸುಟ್ಟುಹಾಕಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಚಿರತೆ ಬೇಟೆ ಆಡುವವರೆ ಅಥವಾ ಇನ್ನಾವ ಕಾರಣಕ್ಕೆ ಚಿರತೆ ಹತ್ಯೆ ಮಾಡಿದ್ದಾರೆ ಎಂಬುದರ ಬಗ್ಗೆ ಕೂಲಂಕುಶ ತನಿಖೆ ಕೈಗೊಂಡಿದ್ದಾರೆ. ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ, ತಾಲೂಕಿನಲ್ಲಿ ಬಹಳ ವರ್ಷಗಳ ನಂತರ ವನ್ಯಜೀವಿಗಳ ಬೇಟೆ ಅಥವಾ ಕೊಲೆ ಪ್ರಕರಣ ವರದಿಯಾಗಿದ್ದು ಅರಣ್ಯ ಇಲಾಖೆ ವನ್ಯ ಪ್ರಾಣಿಗಳ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಚಿರತೆಗೆ ಗುಂಡಿಕ್ಕಿ ಕೊಲೆ- ಓರ್ವ ವಶಕ್ಕೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು