ಬೆಂಗಳೂರು: ಬಿಬಿಎಂಪಿಯ ಹೆಸರು ಗ್ರೇಟರ್ ಬೆಂಗಳೂರು ಅಂತ ಬದಲಾಗಿದೆ. ಅದರ ಜೊತೆಗೆ ಬಿಬಿಎಂಪಿಯ ಅಧಿಕಾರಿಗಳೂ ಕೂಡಾ ಗ್ರೇಟರ್ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಬರೋಬ್ಬರಿ 10 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್ ರೆಡ್ ಹ್ಯಾಅಂಡ್ ಆಗಿ ಲಾಕ್ ಆಗಿದ್ದಾರೆ.
ಲೋಕಾಯುಕ್ತರ ಬಲೆಗೆ ಇಂಜಿನಿಯರ್ ಬಿದ್ದಿದ್ದಾರೆ. ಸಿ.ವಿ.ರಾಮನ್ ನಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವಿ.ಯರಪ್ಪ ರೆಡ್ಡಿ ಲೋಕಾಯುಕ್ತ ಬಲೆಗೆಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.ಗುತ್ತಿಗೆದಾರರ ಕಡತ ಫಾರ್ವರ್ಡ್ ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 10 ಲಕ್ಷ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಲಂಚ ಪಡೆಯುವಾಗ ಇಂಜಿನಿಯರ್ ಲಾಕ್

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು