ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿ ಚೀರನಹಳ್ಳಿ ಗ್ರಾಮದಲ್ಲಿರುವ ಹೇಮಾವತಿ ನಾಲೆಯ ಸೇತುವೆ ಬಳಿ ಬೇಲಿಯಲ್ಲಿ ಜೂನ್ 19 ರಂದು ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು 169 ಸೆಂ.ಮೀ. ಎತ್ತರವಿದ್ದು, ದೇಹವೆಲ್ಲ ಕೊಳೆತು ಚರ್ಮ ಸುಲಿದುಕೊಂಡು ಒಳಮಾಂಸ ಕಾಣಿಸುತ್ತಿದೆ. ಮೃತ ದೇಹದ ಮೇಲೆ ಪಿಂಕ್ ಬಣ್ಣದ ಟೀ-ಷರ್ಟ್ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.08131- 246522, 222210, 0816- 2278000, ಮೊ.9480802960, 35, 00 ಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಅಪರಿಚಿತ ಶವ ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು