ಕೋಲಾರ: ಮಾವಿನಬೆಲೆ ಪಾತಾಳಕ್ಕೆ ಕುಸಿದಿದ್ದು, ಔಷಧಿ ಇದ್ದರೂ ಸಹ ಸರ್ಕಾರ ಯಾವುದೇ ಗಮನಹರಿಸದೆ ನಿರ್ಲಕ್ಷವಹಿಸಿದೆ ಎಂದು ಆರೋಪಿಸಿ ಕೋಲಾರದಲ್ಲಿ ಮಂಗಳವಾರ ರೈತ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವು ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೊಂಡರಾಜನಹಳ್ಳಿ ಗೇಟ್ ಬಳಿ 3-4 ಟ್ರ್ಯಾಕ್ಟರ್ ಲೋಡ್ ಮಾವಿನ ಕಾಯಿಗಳನ್ನು ಸುರಿದು ಆಕ್ರೋಶ ವ್ಯಕ್ತಪಡಿಸಲಾಯಿತು. ತೋತಾಪುರಿ ಮಾವಿನ ಹಣ್ಣಿನ ಬೆಲೆ ಸಂಪೂರ್ಣ ಪಾತಾಳಕ್ಕೆ ಇಳಿದಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ 15 ದಿನಗಳ ಹಿಂದೆಯೇ ಪ್ರತಿ ಕೆಜಿಗೆ 4 ರೂ ಬೆಂಬಲ ಬೆಲೆ ಘೋಷಿಸಿದ್ದರೂ ಸಹ ಕರ್ನಾಟಕ ಸರ್ಕಾರ ತೀವ್ರ ನಿರ್ಲಕ್ಷ ವಹಿಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಕೆಲವೇ ದಿನಗಳಲ್ಲಿ ತೋತಾಪುರಿ ಮಾವಿನ ಹಣ್ಣಿನ ಹಂಗಾಮು ನಿಂತು ಹೋಗಲಿದೆ. ಅಷ್ಟರೊಳಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಹೆದ್ದಾರಿಗೆ ಮಾವು ಸುರಿದು ರೈತರ ಪ್ರತಿಭಟನೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು