ಮೈಸೂರು: ಜಾನುವಾರು ಮೇಯಿಸಲು ಹೋಗಿದ್ದ ತಂದೆ-ಮಗ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಮರವೇರಿ ಕುಳಿತು ರಕ್ಷಿಸಿಕೊಂಡಿರುವ ಘಟನೆ ಬನ್ನೂರು ಬಳಿಯ ಮಾಕನಹಳ್ಳಿಯಲ್ಲಿ ನಡೆದಿದೆ.
ಮಾಕನಹಳ್ಳಿ ಗ್ರಾಮದ ಕೃಷ್ಣಗೌಡ ಮತ್ತು ಅವರ ಮಗ ಪ್ರವೀಣ್ ಜಾನೂವಾರು ಮೇಯಿಸಲೆಂದು ಮೊನ್ನೆ ಕಾವೇರಿ ನದಿಯ ಮತ್ತೊಂದು ಡದದಲ್ಲಿನ ದೇವಿ ತೋಪಿಗೆ ಹೋಗಿದ್ದರು. ಸಂಜೆ ಅಲ್ಲಿಂದ ಹಿಂದಿರುಗಬೇಕು ಎನ್ನುವಷ್ಟರಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನದಿಯನ್ನು ದಾಟಿ ಬರು ಸಾಧ್ಯವಾಗಿಲ್ಲ. ಪ್ರವಾಹೋಪಾದಿಯಲ್ಲಿ ನೀರು ಸ್ಥಳವನ್ನು ಆವರಿಸಿಕೊಳ್ಳುತ್ತಿದ್ದಂತೆ ಬೇರೆ ದಾರಿ ಕಾಣದೇ ತಂದೆ-ಮಗ ಇಬ್ಬರೂ ಅಲ್ಲಿಯೇ ಇದ್ದ ಮರವೇರಿ ಕುಳಿತು ಜೀವ ರಕ್ಷಿಸಿಕೊಂಡಿದ್ದಾರೆ. ಜಾನುವಾರು ಮೇಯಿಸಲು ದೇವಿ ತೋಪಿಗೆ ಹೋದವರು ವಾಪಸ್ ಆಗಿಲ್ಲ ಎಂಬ ಬಗ್ಗೆ ಕುಟುಂಬದವರಿಂದ ಮಹಿತಿ ತಿಳಿದ ಬನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮರವೇರಿ ಕುಳಿತಿದ್ದ ತಂದೆ-ಮಗನನ್ನು ದೋಣಿ ಸಹಾಯದಿಂದ ರಕ್ಷಿಸಿದ್ದಾರೆ.
ಪ್ರವಾಹದಿಂದ ಮರವೇರಿದ ಅಪ್ಪ- ಮಗ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು