ಹನೂರು: ವಿಷವಿಕ್ಕಿ 5 ಹುಲಿಗಳ ಸಾವಿಗೆ ಕಾರಣರಾದ ಮೂವರು ಆರೋಪಿಗಳಿಗೆ 4 ದಿನಗಳ ಕಾಲ ವಿಚಾರಣೆಗೆ ಹನೂರು ಪಟ್ಟಣದಲ್ಲಿರುವ ಅಪರ ಸಿವಿಲ್ ನ್ಯಾಯಧೀಶರು ಆದೇಶಿಸಿದರು.
ನ್ಯಾಯಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಾದ ಮಾಧುರಾಜ್, ನಾಗರಾಜು, ಕೋನಪ್ಪ ಅವರನ್ನು ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ಎಸಿಎಫ್ ಗಜಾನನ ಅವರು ಮನವಿ ಮಾಡಿದರು.ಈ ವೇಳೆ ನ್ಯಾಯಧೀಶರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ವಕೀಲರು ಇದ್ದಾರೆಯೆಂದು ಪ್ರಶ್ನಿಸಿದರು. ಇಲ್ಲ ಎಂದು ತಿಳಿದಾಗ ವಕೀಲರನ್ನು ನೇಮಿಸಿಕೊಂಡು ಬರಲು ಸೂಚಿಸಿದರು. ಕೆಲಕಾಲ ಆರೋಪಿಗಳ ಪರ ಯಾರೊಬ್ಬರೂ ವಕೀಲರು ಮುಂದೆ ಬಂದಿರಲಿಲ್ಲ. ಕೆಲ ಸಮಯದ ಬಳಿಕ ಮಹಾದೇವ ಪ್ರಸಾದ್ ಎಂಬುವರು ವಕಾಲತ್ತು ವಹಿಸಿದರು.
ಎಸಿಎಫ್ ಗಜಾನನ ಅವರು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ವಿಚಾರಣೆಗೆ ಮನವಿ ಮಾಡಿದ್ದು, ಆರೋಪಿಗಳ ಪರ ವಕೀಲರು ಇದಕ್ಕೆ ಸಮ್ಮತಿಸಿದರು. ನಂತರ ನ್ಯಾಯಧೀಶರು ಜೂ.3ರ 2 ಗಂಟೆಗೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
5 ಹುಲಿ ಸಾವು- ಆರೋಪಿಗಳಿಗೆ 4 ದಿನ ವಿಚಾರಣೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು