ಸ್ವಗ್ರಾಮದಲ್ಲಿ ಮನೋಜ್ ಅಂತ್ಯಕ್ರಿಯೆ

ಕುಣಿಗಲ್: ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲು ತುಳಿತಕ್ಕೆ ಒಳಗಾಗಿ ತಾಲೂಕಿನ ನಾಗಸಂದ್ರದ ಹಾಲಿ ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದ ಮನೋಜ್ (24) ಮೃತಪಟ್ಟಿದ್ದು, ಸ್ವಗ್ರಾಮದಲ್ಲಿ ಗುರುವಾರ ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಮನೋಜ್ (24) ಬೆಂಗಳೂರಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ, ತಂದೆ ದೇವರಾಜ್ ಪಾನಿಪೂರಿ ವ್ಯವಹಾರ ಮಾಡುತ್ತಿದ್ದರು, ಬುಧವಾರ ಸಂಜೆ ಪೊಲೀಸರು ಮಾಹಿತಿ ನೀಡಿದ್ದು ಆಸ್ಪತ್ರೆಗೆ ತೆರಳಿದಾಗ ಬೆಳಗ್ಗೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಒಬ್ಬನೆ ಮಗ ಹೆಣವಾಗಿದ್ದ, ಮಗನ ಸಾವನ್ನು ಅರಗಿಸಿಕೊಳ್ಳಲಾಗದೆ ಮೃತನ … Read more

ಅಕ್ರಮ ಜಾನುವಾರು ಸಾಗಾಟ ಪತ್ತೆ

ಮಂಗಳೂರು: ಕೇರಳದಿಂದ ಕರ್ನಾಟಕದ ಕಡೆಗೆ ಕಂಟೈನರ್ ವಾಹನವೊಂದರಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿ 24 ಜಾನುವಾರು ರಕ್ಷಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳದಿಂದ ಕರ್ನಾಟಕ ರಾಜ್ಯದ ಕಡೆಗೆ ಜಾನುವಾರುಗಳನ್ನು ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಮಂಗಳೂರು ಕಮೀಷನರೇಟ್ ವ್ಯಾಪ್ತಿ ಹಾದು ಹೋಗುವ ರಸ್ತೆಗಳಲ್ಲಿ ಹೆಚ್ಚು ಚೆಕ್ ಪೋಸ್ಟ್ ಗಳನ್ನುತೆರೆದಿದ್ದು 01-06-2025 ರಂದು ಬೆಳಗ್ಗಿನ ಜಾವ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಕಂಟೈನರ್ ವಾಹನವನ್ನು ತಲಪಾಡಿ ಟೋಲ್ ಗೇಟ್ ಬಳಿ … Read more

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೂಕುನುಗ್ಗಲು- 11 ಮಂದಿ ಸಾವು ಆರ್ಸಿಬಿಗೆ ಐಪಿಎಲ್ ಟ್ರೋಫಿ- ಸಂಭ್ರರಮಾಚರಣೆ ವೇಳೆ ದುರಂತ

ಸಾವು ತಂದ ಅಭಿಮಾನ ಬೆಂಗಳೂರು: ಸತತ 18 ವರ್ಷಗಳ ನಂತರ ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರರಮಾಚರಣೆಗೆ ಬಂದಿದ್ದ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ನೂಕುನುಗ್ಗಲಿನಿಂದ 11 ಮಂದಿ ಸಾವನ್ನಪ್ಪಿದ್ದಾರೆ. ಟ್ರೋಫಿ ಗೆದ್ದ ತಂಡವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕ, ಯುವತಿಯರು ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಉಂಟಾದ ತಳ್ಳಾಟ, ನೂಕುನುಗ್ಗಲಿನಿಂದ ಹಲವಾರು ಮಂದಿ ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಬೌರಿಂಗ್ ಆಸ್ಪತ್ರೆಯಲ್ಲಿ … Read more

ಒಂಟೆ, ಗೋವುಗಳ ಹತ್ಯೆ ನಿಷೇಧ

ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 7ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದ‘ರ್ದಲ್ಲಿ ಅಕ್ರಮವಾಗಿ ಒಂಟೆ, ಗೋವುಗಳ ಹತ್ಯೆ ಹಾಗೂ ಅನಧಿಕೃತ ಸಾಗಾಣಿಕೆ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿ ಕಾನೂನು ಬಾಹಿರವಾಗಿ ಪ್ರಾಣಿಗಳ ಸಾಗಾಣಿಕೆ ಅಥವಾ ಹತ್ಯೆ ಮಾಡುವುದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಕೋವಿಡ್ ಪಾಸಿಟೀವ್- ಜಿಲ್ಲೆಯಲ್ಲಿ 1 ಸಾವು

ತುಮಕೂರು: ಕೋವಿಡ್ ಪಾಸಿಟೀವ್ನಿಂದ ಜಿಲ್ಲೆಯ ತುರುವೇಕೆರೆ ತಾಲೂಕಿನ 42 ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಪ್ರಕರಣ ಸೋಮವಾರ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಶುಭು ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಕೋವಿಡ್ ಸಂಬಂಧಿ ತುರ್ತು ಪತ್ರಿಕಾ ಹೇಳಿಕೆ ನೀಡಿದ ಅವರು ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೂನ್ 2ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಐಎಲ್ ಐ ಹಾಗೂ ಸಾರಿ ಪ್ರಕರಣಗಳಿಂದ 36 ಗಂಟಲು ದ್ರವ … Read more

ಪರೀಕ್ಷೆಯಲ್ಲಿ ಫೆಲ್: ಬಾಲಕ ನೇಣಿಗೆ ಶರಣು

ಮಧುಗಿರಿ: ಸದಾ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣ ನೇಣಿಗೆ ಶರಣಾಗಿರುವ ಘಟನೆ ಮಧುಗಿರಿಯಲ್ಲಿ ನದೆದಿದೆ. ಮಧುಗಿರಿ ಪಟ್ಟಣದ ಕಪ್ಪಣ್ಣನ ಬೀದಿಯ ವಾಸಿಯಾದ ಸತೀಶ್ ಕುಮಾರ್ ಹಾಗೂ ಲಕ್ಷ್ಮೀ ದಂಪತಿ ಮಗ ಅಕ್ಷಯ್(19) ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೊದಲ ಬಾರಿಗೆ 4 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ ಅಕ್ಷಯ್ ಮರು ಪರೀಕ್ಷೆಯಲ್ಲಿ 2 ವಿಷಯದಲ್ಲಿ ಪಾಸಾಗಿದ್ದು ಮತ್ತೆ ಇನ್ನೂ 2 ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ, ಅಲ್ಲದೆ ಪದೇ ಪದೇ ಅನಾರೋಗ್ಯಕ್ಕೆ … Read more

ಕೊರಟಗೆರೆಗೆ ಕರಡಿ ಎಂಟ್ರಿ- ಬೆಚ್ಚಿದ ಜನ

ಕೊರಟಗೆರೆ: ಅರಣ್ಯ ಪ್ರದೇಶದಿಂದ ಆಹಾರ ಹರಸಿ ಬಂದ ಕರಡಿಯೊಂದು ನೇರವಾಗಿ ಕೊರಟಗೆರೆ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದು ರಸ್ತೆ ದಾಟುತ್ತಿರುವ ವೀಡಿಯೋ ಸಿಸಿ ಟಿಯಿಯಲ್ಲಿ ಸೆರೆಯಾಗಿದ್ದು ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಮಂಗಳವಾರ ಬೆ.4 ಗಂಟೆ ಸುಮಾರಿಗೆ ಪಟ್ಟಣದ ಶನೇಶ್ವರ ಸ್ವಾಮಿ ದೇವಾಲಯ ರಸ್ತೆಯಿಂದ ಶಿವಗಂಗಾ ಚಿತ್ರಮಂದಿರ ರಸ್ತೆ ಕಡೆಗೆ ದಾಟುತ್ತಿರುವ ವೀಡಿಯೋ ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು ಮುಂಜಾನೆ ವಾಯು ವಿಹಾರಕ್ಕೆಂದು ಹೊರ ಬಂದ ಕೆಲ ಜನರು ಭಯಭೀತರಾಗಿದ್ದಾರೆ. ಅರಣ್ಯಾಧಿಕಾರಿಗಳ ಬೇಜಾವಬ್ದಾರಿ ತನದಿಂದ ಕೊರಟಗೆರೆ ತಾಲ್ಲೂಕಿನ ಸುತ್ತಮುತ್ತ … Read more

ಅಪರಿಚಿತ ವ್ಯಕ್ತಿ ಶವ ಪತ್ತೆ

ತುಮಕೂರು: ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿ ಬಟವಾಡಿ ಬಳಿ ಇರುವ ಅಕ್ಕ ತಂಗಿ ಕೆರೆಯಲ್ಲಿ ಮೇ 30ರಂದು ಅಪರಿಚಿತ ವ್ಯಕ್ತಿಯ ಶವವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತನು ಸುಮಾರು 65 ವರ್ಷ ವಯಸ್ಸು 163 ಸೆಂ.ಮೀ. ಎತ್ತರವಿದ್ದು, ಮೃತ ದೇಹವು ಚಹರೆ ಗುರುತಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಮೃತನ ಮೈಮೇಲೆ ಗಾಢ ನೀಲಿ ಬಣ್ಣದ ಫುಲ್ ಓವರ್, ನೇರಳೆ ಬಣ್ಣದ ಅ‘ರ್ ತೋಳಿನ ಅಂಗಿ, ಕಪ್ಪು ಬಣ್ಣದ ಬನಿಯನ್, ಕಪ್ಪು … Read more