ಶವಗಳ ಹೂತಿಟ್ಟ ಪ್ರಕರಣ- 12 ಮೂಳೆ ಪತ್ತೆ

ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವನ ದೇಹದ 12 ಭಾಗಗಳ ಜೊತೆಗೆ ಒಳ ಉಡುಪಿನ ತುಂಡು ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ. 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ, ಕೈ, ಕಾಲಿನ 2 ಮೂಳೆ ಸೇರಿದಂತೆ ಇತರೆ ಸಣ್ಣ ಮೂಳೆಗಳು ಪತ್ತೆಯಾಗಿವೆ, ಬುರಡೆಯ ಎರಡು ತುಂಡುಗಳು ಪತ್ತೆಯಾಗಿವೆ.ಮೂಳೆ, ಬುರುಡೆಯ ತುಂಡು ಸಂರಕ್ಷಿಸಿ ಎಫ್ ಎಸ್ ಎಲ್ ತಂಡ ಕೊಂಡೊಯ್ಯಲಿದೆ.ಯಾವುದೇ ಸಾಕ್ಷ್ಯ ನಾಶವಾಗದಂತೆ ಎಸ್ ಐಟಿಯಿಂದ ಕಟ್ಟೆಚ್ಚರ, ಗುಂಡಿಯೊಳಗೆ ನೀರು … Read more

ಮಹಿಳೆ ಸಾವು- ಪ್ರಕರಣ ದಾಖಲು

ಕುಣಿಗಲ್: ಚಿಕಿತ್ಸೆಗೆಂದು ಪಟ್ಟಣದ ಖಾಸಗಿ ಆಸ್ಪತ್ರೆಗೆ ಬಂದ ಮಹಿಳೆ ಚಿಕಿತ್ಸೆ ಪಡೆದ ನಂತರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವಾಗಿ ಹೆಚ್ಚಿನ ಚಿಕಿತ್ಸೆಗೆ ಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ಮೃತಪಟ್ಟಿದ್ದು ಮಹಿಳೆಗೆ ಸಾವಿಗೆ ಖಾಸಗಿ ಆಸ್ಪತ್ರೆಯವರೆ ಕಾರಣ ಎಂದು ಕುಟುಂಬದವರು ಆರೋಪಿಸಿ ದೂರು ನೀಡಿದ್ದು ಪೊಲೀಸರು ಅನುಮಾನಾಸ್ಪದ ಸಾವಿನ ಘಟನೆ ಎಂದು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ. ಪಟ್ಟಣದ ದೊಡ್ಡಪೇಟೆ ವಾಸಿ ಪಾರ್ವತಮ್ಮ( 50) ಚಿಕಿತ್ಸೆಗೆಂದು ಮಂಗಳವಾರ ಸಂಜೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಆಗಮಿಸಿದಾಗ, ತಪಾಸಣೆ ನಡೆಸಿದ ವೈದ್ಯರು ಚುಚ್ಚುಮದ್ದು … Read more

ಬೈಕ್ ನಿಂದ ಕರ್ಕಶ ಶಬ್ದ- ಬಿತ್ತು ದಂಡ

ತಿಪಟೂರು: ನಗರದಲ್ಲಿ ಯಾವುದೇ ದಾಖಲೆ ಮತ್ತು ನಂಬರ್ ಪ್ಲೇಟ್ ಇಲ್ಲದೆ ಕರ್ಕಶ ಶಬ್ದದೊಂದಿಗೆ ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ವೃದ್ಧರಿಗೆ ತೊಂದರೆ ನೀಡಿ ಚಲಾಯಿಸುತ್ತಿದ್ದ ಬೈಕ್ ಸವಾರ ಜತಿನ್ ರಾಜ್ ಬಿನ್ ಸುರೇಶ್ ಎಂಬುವರನ್ನು ನಗರ ಠಾಣೆ ಪೊಲೀಸರು ದ್ವಿಚಕ್ರ ವಾಹನ ಸಮೇತ ವಶಕ್ಕೆ ತೆಗೆದುಕೊಂಡು10,500 ದಂಡ ವಿಧಿಸಿದ್ದಾರೆ.

ಬಾಲಕಿಯ ಅತ್ಯಾಚಾರಗೈದ ಅಪರಾಧಿಗೆ 20 ವರ್ಷ ದಂಡಸಮೇತ ಕಠಿಣ ಜೈಲುಶಿಕ್ಷೆ

ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭವತಿಯನ್ನಾಗಿಸಿದ ಆರೋಪಿಯನ್ನು ’ದೋಷಿ’ ಎಂದು ಘೋಷಿಸಿ, 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಪೋಕ್ಸೊನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದ ದೋಷಿಯು ಮೂರು ಮಕ್ಕಳ ತಂದೆಯಾಗಿದ್ದು, ಬಾಲಕಿಯ ಸಂಬಂಧಿಯೂ ಆಗಿದ್ದಾನೆ. ಬಾಲಕಿಯ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯ ಎಸಗಿದ ಈತ ಈ ವಿಷಯವನ್ನು ಪೋಷಕರಿಗೆ ತಿಳಿಸಿದರೆ ಜೀವಕ್ಕೆ ತೊಂದರೆ ಮಾಡುವುದಾಗಿ ಬೆದರಿಸಿದ್ದ. ಹಲವು ಬಾರಿ ಸಂತ್ರಸ್ತೆ ಮೇಲೆ ದೌರ್ಜನ್ಯ ಎದುರಿಸಿರುವುದು ತನಿಖೆಯಿಂದ ತಿಳಿದು ಬಂದಿತ್ತು. … Read more

ಮಿಸ್ ಫೈರ್ಯುವತಿ ಕಿಡ್ನಿ ಡಮರ್

ಬೆಂಗಳೂರು: ಪಿಸ್ತೂಲ್ ನಿಂದ ಮಿಸ್ ಫೈರ್ ಆದ ಗುಂಡು ತಗುಲಿ ಯುವತಿಯ ಒಂದು ಕಿಡ್ನಿಗೆ ತೀವ್ರ ಹಾನಿಯಾದ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೇಚಲ್ (32) ಎಂಬವರು ಕಿಡ್ನಿ ಕಳೆದುಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದ ಈಕೆಯ ಸ್ನೇಹಿತನಾದ ನಿಖಿಲ್ ನಾಯಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ 125ಬಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 25 (1), 27, 30ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಕ್ಸ್ ಟೌನ್ ನ ನಿವಾಸಿಯಾಗಿದ್ದ … Read more

ಕಸದ ವಾಹನ ಹರಿದು 3 ವರ್ಷದ ಮಗು ಸಾವು

ಬಳ್ಳಾರಿ: ರಸ್ತೆಬದಿ ಆಟ ಆಡುತ್ತಿದ್ದ ವೇಳೆ ಘೋರ ದುರಂತ ಸಂಭವಿಸಿದ್ದು, ಕಸದ ವಾಹನ ಹರಿದು 3 ವರ್ಷದ ಮಗು ಸಾವನ್ನಪ್ಪಿದ ಘಟನೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದಿದೆ. ಮಹಾನಗರ ಪಾಲಿಕೆ ಕಸ ಸಂಗ್ರಹಿಸುವ ಟಾಟಾ ಏಸ್ ವಾಹನ ಹರಿದು ಶೈಲಜಾ- ಸಮರ ದಂಪತಿ ಪುತ್ರ ವಿಕ್ಕಿ (3) ಮೃತಪಟ್ಟಿದ್ದಾನೆ. ಬೆಳಗ್ಗೆ ಬಾಪುಜಿ ನಗರದಲ್ಲಿ ಕಸ ಸಂಗ್ರಹಿಸಲು ವಾಹನ ಬಂದಿತ್ತು. ಈ ವೇಳೆ, ರಸ್ತೆ ಬದಿ ಆಟ ಆಡುತ್ತಿದ್ದ ವಿಕ್ಕಿ ತಲೆ ಮೇಲೆ ವಾಹನ ಹರಿದಿದೆ. ಕೂಡಲೇ ಮಗುವನ್ನ … Read more

ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲ ಮಣ್ಣು ತಿಂದು ಪ್ರತಿಭಟನೆ ನಡೆಸಿದ ರೈತ

ಕೊಪ್ಪಳ: ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಎಲ್ಲಿಯೂ ರಸಗೊಬ್ಬರ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತನೊಬ್ಬ ಮಣ್ಣು ತಿಂದು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಣಿಕೇರಿ ತಾಂಡಾದ ಚಂದ್ರಪ್ಪ ಮತ್ತು ನೂರಾರು ರೈತರು ಯೂರಿಯಾ ಖರೀದಿಸಲು ಕೊಪ್ಪಳ ಎಪಿಎಂಸಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಶನಿವಾರ ಬೆಳಿಗ್ಗೆ 4 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಹಲವು ಗಂಟೆಗಳ ಕಾಲ ನಿಂತರೂ ಗೊಬ್ಬರ ಸಿಗದ ಕಾರಣ ಬರಿಗೈಯಲ್ಲಿ ವಾಪಸ್ಸಾಗಬೇಕಾಯಿತು. ಇದರಿಂದ ಸಿಟ್ಟಿಗೆದ್ದ ರೈತರು … Read more

ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: ಇಬ್ಬರ ಸಾವು

ಶಿವಮೊಗ್ಗ: ಬುಧವಾರ ಬೆಳಗಿನ ಜಾವ ರಸ್ತೆಬದಿಯಲ್ಲಿ ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಬಸ್ ಕಂಡಕ್ಟರ್ ಅಣ್ಣಪ್ಪ (32) ಮತ್ತು ಪ್ರಯಾಣಿಕ ಹರ್ಷಿತ್ (25) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಗಾಜನೂರಿನ ಬಳಿ, ಮಂಗಳೂರಿನಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಬಸ್ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ … Read more

ವಿಶ್ವದಾಖಲೆ ನಿರ್ಮಿಸಿದ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ನಿರಂತರ 170 ಗಂಟೆ ಭರತನಾಟ್ಯ ಪ್ರದರ್ಶನ

ಮಂಗಳೂರು: ನಿರಂತರ 170 ಗಂಟೆ ಭರತನಾಟ್ಯ ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾಡ್ ಸೇರ್ಪಡೆಯಾಗಿದೆ. ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್ ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಸತತ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ಸತತ 127 ಗಂಟೆ ಭರತನಾಟ್ಯ ಪ್ರದರ್ಶನ. ಇದೀಗ 170 ಗಂಟೆ ಸತತ ಪ್ರದರ್ಶನ ನೀಡುವ … Read more

ಗಾಂಜಾ ಕಳ್ಳ ಸಾಗಣೆ- ಆರು ಮಂದಿ ಬಂಧನ

ಬೆಂಗಳೂರು: ಗಾಂಜಾ ಕಳ್ಳ ಸಾಗಣೆ ಮಾಡುತ್ತಿದ್ದ ಆರು ಮಂದಿ ಅಂತರ ರಾಜ್ಯಚೋರರನ್ನು ಬಂಧಿಸಿರುವ ಕಾಟನ್ ಪೇಟೆ ಠಾಣೆ ಪೊಲೀಸರು 42 ಲಕ್ಷ ವೌಲ್ಯದ 53.5 ಕೆ.ಜಿ ಗಾಂಜಾ, 9ಮೊಬೈಲ್, 10 ಸಿಮ್ ಕಾರ್ಡ್, 1ಲ್ಯಾಪ್ ಟಾಪ್, 1 ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಬಿಹಾರದ ದೀಪಕ್ ಕುಮಾರ್(22), ಅಮರನಾಥ್(61), ರಾಜಸ್ಥಾನದ ಶಂಕರ್ ಲಾಲ್(36) ಮತ್ತು ಒಡಿಸ್ಸಾದ ನೂರುದ್ದೀನ್ ದುಲೈ(38), ಜಾರ್ಖಂಡ್ ನಿವಾಸಿಗಳಾದ ಬಸಂತ್ ಕುಮಾರ್(35) ಮತ್ತು ಅಜಿತ್ ಸಿಂಗ್(43) ಬಂ ತ ಆರೋಪಿಗಳು.ಕಳೆದ ಜು.12 ರಂದು ಠಾಣೆ ಸರಹದ್ದಿನ … Read more