ಕೊರಟಗೆರೆ: ಕಾವರಗಲ್ ಅರಣ್ಯ ಪ್ರದೇಶದ ಕ್ರಷರ್ ಬಂಡೆಯ ಇಳಿಜಾರಿನಲ್ಲಿ ಕಾರ್ಮಿಕರು ಅಭದ್ರತೆಯಲ್ಲಿ ಡ್ರಿಲ್ಲಿಂಗ್ ಮಾಡುತ್ತಿದ್ದ ವೇಳೆ ಮೇಲಿಂದ ಬಂಡೆ ಕುಸಿದ ಹಿನ್ನೆಲೆ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿರುವ ಮತ್ತಿಬ್ಬರು ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿಇಗ್ರಹಾರ ಗ್ರಾಮದ ಸರ್ವೆ ನಂ.35ರಲ್ಲಿನ ಚಂದ್ರಶೇಖರ ಬಾಬು ಎಂಬುವರಿಗೆ ಸೇರಿದ ಕಲ್ಲುಕ್ವಾರೆಯಲ್ಲಿ ಸೋಮವಾರ ಸಂಜೆ ಈ ಅವಘಡ ನಡೆದಿದೆ. ಮಧ್ಯಪ್ರದೇಶ ಮೂಲದ ಕಾರ್ಮಿಕ ದಾಲ್ಮನ್ (26) ಮೃತಪಟ್ಟಿರುವ ದುರ್ದೈವಿ, ಅಶೋಕ (32) ಮತ್ತು ಸೌದರಸಿಂಗ್ (34)ಗೆ ಕಿವಿ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.
ಬಂಡೆ ಸ್ಪೋಟಿಸುವ ಉದ್ದೇಶದಿಂದ ಮೇಲೆ ನಿಂತು ಕಾರ್ಮಿಕರು ಡ್ರಿಲ್ಲಿಂಗ್ ಮಾಡುತ್ತಿದ್ದರು, ಈ ವೇಳೆ ಬಂಡೆ ಬಿರುಕು ಬಿಟ್ಟು 50 ಅಡಿ ಮೇಲಿನಿಂದ ಕಲ್ಲುಗಳ ಸಮೇತ ಕೆಳಗೆ ಬಿದ್ದು ಈ ಘಟನೆ ನಡೆದಿದೆ.
ಎಟ್ಟಿ ಅಗ್ರಹಾರದ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕೆ.ಮಂಜುನಾಥ್, ಸಿಪಿಐ ಅನಿಲ್ ಮತ್ತು ಗಣಿ ಇಲಾಖೆಯ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲಿಸಿದರು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಡೆ ಬಿದ್ದು ಕಾರ್ಮಿಕ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು