
ಬೆಂಗಳೂರು: ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಬೆಂಗಳೂರು ಕೋಲಾರದಲ್ಲಿ ಒಟ್ಟು ಐದು ಕಡೆ ದಾಳಿ ಮಾಡಿದ್ದು, ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಾಂದ್ ಪಾಷಾ ಅನೀಸ್ ಹಾಗೂ ಫಾತಿಮಾ ಎನ್ನುವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಲಾಗಿದ್ದು, ದಾಳಿ ವೇಳೆ ಎನ್ ಐಎ ಅಧಿಕಾರಿಗಳು 2 ವಾಕಿಟಾಕಿ, ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಈ ಮೂವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಫಾತಿಮಾ ಉಗ್ರ ಕೃತ್ಯದಲ್ಲಿ ಶಾಮೀಲಾಗಿರುವ ಜುನೈದ್ ಅಹ್ಮದ್ ನ ತಾಯಿ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳನ್ನು ಲಷ್ಕಟ್-ಎ- ತೊಯ್ಬಾ ಉಗ್ರ ಸಂಘಟನೆಗೆ ಸೇರುವಂತೆ ಟಿ.ನಾಸೀರ್ ಪ್ರಚೋದನೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಮೂವರು ಶಂಕಿತ ಉಗ್ರರ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


