--ಇಲ್ಲಿ ಜಾಹೀರಾತು--

ಉಪ ಲೋಕಾಯುಕ್ತರಿಗೆ ವಂಚನೆ ಯತ್ನ

On: July 11, 2025 2:20 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಉಪ ಲೋಕಾಯುಕ್ತರಿಗೆ ಸೈಬರ್ ವಂಚಕರು ವಂಚಿಸಲು ಯತ್ನಿಸಿರುವ ಘಟನೆ ನಡೆದಿದೆ.
ಜುಲೈ 9 ರಂದು ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರಿಗೆ ಕರೆ ಮಾಡಿದ್ದ ಅಪರಿಚಿತರು ಬೆದರಿಸಲು ಯತ್ನಿಸಿದ್ದು, ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರಿಗೆ ಕರೆ ಮಾಡಿದ್ದ ಅಪರಿಚಿತರು, ಹಿರಿಯ ಕಾನೂನು ಸಲಹೆಗಾರ ದೀಪಕ್ ಕುಮಾರ್ ಶರ್ಮಾ ಹಾಗೂ ಕಿರಿಯ ಕಾನೂನು ಸಲಹೆಗಾರ ರಾಹುಲ್ ಕುಮಾರ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದರು.
ಮುಂಬೈನಲ್ಲಿರುವ ಭಾರತೀಯ ದತ್ತಾಂಶ ಸಂರಕ್ಷಣಾ ಮಂಡಳಿಯಿಂದ ಕರೆ ಮಾಡುತ್ತಿದ್ದು, ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಫೋನ್ ನಂಬರ್ನಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದಿದ್ದಾರೆ.ಅದಕ್ಕೆ ‘ನೋಟೀಸ್ ಕಳುಹಿಸಿ ಕೊಡಿ’ ಎಂದು ತಾವು ಸೂಚಿಸಿದ್ದು, ಕರೆಯ ಕುರಿತು ಅನುಮಾನವಿದೆ ಎಂದು ಉಪ ಲೋಕಾಯುಕ್ತರು ದೂರು ನೀಡಿದ್ದಾರೆ.ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು, ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now