
ಗುಬ್ಬಿ: ಹಾಡ ಹಗಲಲ್ಲಿಯೇ ಪಟ್ಟಣದಲ್ಲಿ ಮನೆ ಬೀಗ ಮುರಿದು ಒಡವೆ ಮತ್ತು ಹಣ ದೋಚಿರುವುದು ಪಟ್ಟಣದ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.
ಪಟ್ಟಣದ ಮಾರುತಿ ನಗರದ ನಿವಾಸಿಗಳಾದ ಸರ್ವೇಯರ್ ಜಗದೀಶ್ ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದ ವೇಳೆ ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು ಹಣ, ಒಡವೆ ಕದ್ದೊಯ್ದಿದ್ದಾರೆ.
ಜಗದೀಶ್ ದಂಪತಿ ಮಗಳ ಮದುವೆ ನಿಶ್ಚಯವಾಗಿದ್ದು, ಮುಂದಿನ ಭಾನುವಾರ ನಿಶ್ಚಿತಾರ್ಥಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು, ಸ್ನೇಹಿತರ ಬಳಿ ಹಣ ಪಡೆದು ತಂದು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಕೆಲಸ ಮುಗಿಸಿಕೊಂಡು ದಂಪತಿ ಮನೆಗೆ ಹಿಂದಿರುಗಿ ಬಂದಾಗ ಮನೆಯ ಬೀಗ ಒಡೆದಿರುವುದು ಕಂಡು ಬಂದಿದೆ, ಕಳ್ಳತನವಾಗಿರುವುದನ್ನು ತಿಳಿದು ತಕ್ಷಣ ಪೊಲೀಸರು ಹಾಗೂ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ರಾಘವೇಂದ್ರ ಹಾಗೂ ಪಿಎಸ್ ಐ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಮನೆ ಬೀಗ ಮುರಿದು ಒಡವೆ, ಹಣ ಕಳ್ಳತನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


