
ಕೊರಟಗೆರೆ: ಮನುಷ್ಯನ ವಿಕೃತಿಯ ಮನಸ್ಸು ಹೇಗಿರುತ್ತೇ ಎಂಬುದಕ್ಕೆ ಕೊರಟಗೆರೆಯಲ್ಲಿ ಸಿಕ್ಕಿರುವ ಮಹಿಳೆಯ ದೇಹದ ತುಂಡು ತುಂಡು ಭಾಗಗಳೇ ಹೇಳುತ್ತೆ, ಅಪರಿಚಿತ ಮಹಿಳೆಯ ರುಂಡ- ಮುಂಡ ಸೇರಿದಂತೆ ಕೈಕಾಲು ಕಟ್ ಮಾಡಿ ಹತ್ತಾರು ಕಡೆಗಳಲ್ಲಿ ಎಸೆದಿರುವ ಕೃತ್ಯ ಮಾನವ ಕುಲವನ್ನೇ ಪ್ರಶ್ನೆ ಮಾಡುವ ಹಾಗೆ ಮಾಡಿದೆ.
ಇದು ನಡೆದಿರೋದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರವಾದ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪದ ಮುತ್ಯಾಲಮ್ಮ ದೇವಾಲಯ ಮತ್ತು ಸಿದ್ದರಬೆಟ್ಟದ ಸುಮಾರು 8 ಕಡೆಗಳಲ್ಲಿ ಅಪರಿಚಿತ ಮಹಿಳೆಯ ತುಂಡು ತುಂಡಾದ ಭಾಗಗಳು ದೊರೆತಿವೆ.
ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿದ ದುಷ್ಕರ್ಮಿ ಮೃತ ದೇಹದ ರುಂಡ ಮುಂಡ ಬೇರ್ಪಡಿದ್ದಾನೆ, ಆಕೆಯ ಪ್ರತಿಯೊಂದು ಭಾಗವನ್ನು ಕತ್ತರಿಸಿ ಪ್ಲಾಸ್ಟಿಕ್ ಕವರಿನಲ್ಲಿ ಪ್ಯಾಕ್ ಮಾಡಿ ಅದನ್ನು ಕೊರಟಗೆರೆಗೆ ತಂದು ಹತ್ತಾರು ಕಡೆ ಎಸೆದಿರೋದು ಕಂಡು ಬಂದಿದೆ. ದೇಹದ ಭಾಗಗಳು ಮಾತ್ರ ಪತ್ತೆಯಾಗಿದ್ದು ತಲೆ ಬುರುಡೆ ಮತ್ತು ಮುಖವೇ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ.
8 ಕಡೆಗಳಲ್ಲಿ ಮಹಿಳೆಯ ಭಾಗ ಪತ್ತೆ
ಚಿಂಪುಗಾನಹಳ್ಳಿಯ ಸೇತುವೆ ಬಳಿ ಬಲಗೈ ಮತ್ತು ದೇಹದ ಭಾಗ, ಮುತ್ಯಾಲಮ್ಮ ದೇವಾಲಯ ಮುಂಭಾಗ ಎಡಗೈ, ಲಿಂಗಾಪುರ ರಸ್ತೆಯ ಸೇತುವೆ ಬಳಿ ಕರುಳಿನ ಭಾಗ, ಬೆಂಡೋಣಿ ನರ್ಸರಿ ಸಮೀಪ ಹೊಟ್ಟೆಯ ಜೊತೆ ಲೀವರ್ ಮತ್ತು ಜೋನಿಗರಹಳ್ಳಿ ಸಮೀಪ ರಕ್ತಸಿಕ್ತ ಖಾಲಿ ಬ್ಯಾಗು ಸೇರಿ ಸುಮಾರು 8 ಕಡೆಗಳಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿದ ಸ್ಥಿತಿಯಲ್ಲಿ ಮಹಿಳೆಯ ದೇಹದ ಭಾಗಗಳು ದೊರೆತಿವೆ.
ಕೈ ಕಾಲು ನೋಡಿ ಪೊಲೀಸರೇ ಶಾಕ್- ಸ್ಥಳಕ್ಕೆ ಎಸ್ಪಿ ಭೇಟಿಮಹಿಳೆ ದೇಹ ತುಂಡು ಮಾಡಿದ ದುಷ್ಕರ್ಮಿ!

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


