
ಗುಬ್ಬಿ: ತಾಲೂಕಿನ ನೇರಳೆಕೆರೆ ಹಾಗೂ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಎರಡು ಚಿರತೆ ಇಬ್ಬರ ಮೇಲೆ ಅಟ್ಯಾಕ್ ಮಾಡಿದಂತಹ ಘಟನೆ ಬುಧವಾರ ನಡೆದಿತ್ತು. ಗುರುವಾರ ಬಿ.ಕೋಡಿಹಳ್ಳಿ ಭಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನರಸಿಂಹಯ್ಯ ಹಾಗೂ ಬಿ.ಕೋಡಿಹಳ್ಳಿಯಲ್ಲಿ ಬೆಟ್ಟಸ್ವಾಮಿ ಎಂಬುವರ ಮೇಲೆ ಚಿರತೆ ಅಟ್ಯಾಕ್ ಮಾಡಿ ಗಾಯಗೊಳಿಸಿತ್ತು, ಗುರುವಾರ ಅರಣ್ಯ ಇಲಾಖೆಯ ಅಧಿಕಾರಿ ಸತೀಶ್ ಚಂದ್ರ ನೇತೃತ್ವದಲ್ಲಿ ಎಂಟು ವರ್ಷದ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ದೂರದ ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನ ಹಳ್ಳಿ ತಾಲೂಕುಗಳಲ್ಲಿ ಅತ್ಯಧಿಕ ಚಿರತೆ ಕಾಣಿಸಿಕೊಳ್ಳುತ್ತಲೇ ಇದ್ದು ಕುರಿ, ಮೇಕೆಗಳ ಮೇಲೆ ದಾಳಿ ಮಾಡುತ್ತಲೇ ಇವೆ, ಕಳೆದ ವಾರ ತುರುವೇಕೆರೆ ತಾಲೂಕಿನಲ್ಲಿ ಐದು ಜನರ ಮೇಲೆ ಚಿರತೆ ದಾಳಿ ಮಾಡಿತ್ತು, ಇಡೀ ತುರುವೇಕೆರೆ ಭಾಗದ ಹಳ್ಳಿಯ ಜನರನ್ನ ಗಾಬರಿಗೊಳಿಸಿತ್ತು, ಅದೇ ರೀತಿಯಲ್ಲಿ ಗುಬ್ಬಿಯಲ್ಲೂ ಇಬ್ಬರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ರೈತರೂ ರಾತ್ರಿಯ ವೇಳೆ ಹಾಗೂ ತೋಟದ ಸಾಲುಗಳಲ್ಲಿ ಕೆಲಸ ಮಾಡುವುದಕ್ಕೆ ಸಾಕಷ್ಟು ಹೆದರಿದ್ದರು.
ನಿರಂತರವಾಗಿ ಬೋನು ಅಳವಡಿಸಿ ಚಿರತೆ ಹಿಡಿದು ದೂರದ ಕಾಡುಗಳಿಗೆ ಬಿಟ್ಟರೂ ಸಹ ಮತ್ತೆ ಮತ್ತೆ ಚಿರತೆಗಳು ಕಾಣಿಸಿಕೊಳ್ಳುತ್ತಲೇ ಇದ್ದು ಅರಣ್ಯ ಇಲಾಖೆಗೂ ಸಹ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಬಿ.ಕೋಡಿಹಳ್ಳಿಯಲ್ಲಿ ಚಿರತೆ ಸೆರೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


