
ಕುಣಿಗಲ್: ಸ್ನೇಹಿತರೊಂದಿಗೆ ಕುಳಿತಿದ್ದ ಯುವಕ ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ಪಟ್ಟಣದ ಆರ್ ಎಂಸಿ ಯಾರ್ಡ್ ಬಳಿ ಸಂಭವಿಸಿದೆ.
ಮೃತನನ್ನು ವಾನಾಂಬಾಡಿ ಕಾಲೋನಿಯ ಅಭಿಲಾಷ (22) ಎಂದು ಗುರುತಿಸಲಾಗಿದೆ, ಈತ ಅಂಚೆಪಾಳ್ಯದ ಟೈಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸ್ವಾತಂತ್ರೋತ್ಸವ ರಜೆ ನಿಮಿತ್ತ ಕೆಲಸಕ್ಕೆ ಹೋಗಿರಲಿಲ್ಲ. ಸ್ನೇಹಿತರು ಕರೆದ ಹಿನ್ನೆಲೆಯಲ್ಲಿ ಆರ್ ಎಂಸಿ ಯಾರ್ಡ್ ಬಳಿ ಬೈಕ್ ನಲ್ಲಿ ಬಂದು ಕುಸಿದು ಬಿದ್ದಿದ್ದ ಸ್ನೇಹಿತರು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದಾರೆ, ಸಾವಿಗೆ ಹೃದಯಘಾತ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದ್ದು ಸಂಬಂಧಿಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕುಸಿದು ಬಿದ್ದು ಯುವಕ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


