
ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬೆಂಬಲಿಗರ ವಿರೋಧದ ನಡುವೆ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದಿದ್ದು ಸ್ಥಳದಲ್ಲಿ ಹೈ ಡ್ರಾಮಾ ನಡೆದು ಹೋಗಿದೆ.
ಪೊಲೀಸರು ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ನಡುವೆ ವಾಕ್ಸಮರ ನಡೆದಿದ್ದು, ಧರ್ಮಸ್ಥಳದ ಕೇಸ್ ಮುಚ್ಚಿ ಹಾಕಲು ಇದೊಂದು ಮಹಾ ಷಡ್ಯಂತ್ರ ಎಂದು ತಿಮರೋಡಿ ಮಾಧ್ಯಮಗಳೆದುರು ಕೆಂಡಕಾರಿದ್ದಾರೆ.
ಪೊಲೀಸರು ವಶಕ್ಕೆ ಪಡೆದ ಬಳಿಕ ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಗರಂ ಆಗಿದ್ದು, ಬಹಿರಂಗವಾಗಿಯೇ ಕೋಪಗೊಂಡಿದ್ದಾರೆ.
ನನಗೇನಾದರೂ ಆದರೆ ಪೊಲೀಸರೇ ಕಾರಣ, ಬಿಜೆಪಿಯವರು ನೇರವಾಗಿ ಕಾರಣವಾಗಿರುತ್ತಾರೆ ಎಂದು ಆರೋಪಿಸಿದ್ದಾರೆ. ಸುಳ್ಳು ಕೇಸ್ ಹಾಕಿ ನಮ್ಮನ್ನು ಒಳಗೆ ಹಾಕುತ್ತಿದ್ದಾರೆ. ಸರ್ಕಾರವೂ ಇದಕ್ಕೆ ಪ್ರಮುಖ ಹೊಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ನನ್ನನ್ನು ಅರೆಸ್ಟ್ ಮಾಡೋದು, ಸತ್ಯ ಮುಚ್ಚಿ ಹಾಕುವುದು ಇದೆಲ್ಲಾ ಬಿಜೆಪಿಯವರ ಪಾಪದ ಕೂಸು, ಅವರೆಲ್ಲ ಸರ್ವನಾಶವಾಗಿ ಹೋಗುತ್ತಾರೆ ಎಂದು ತಿಮರೋಡಿ ಕಿಡಿಕಾರಿದ್ದಾರೆ.
ವಾರೆಂಟ್ ಇಲ್ಲದೇ ಪೊಲೀಸರು ಬಂದಿದ್ದಾರೆ.ಎಸ್ ಐಟಿ ತನಿಖೆಯನ್ನು ಮುಚ್ಚಿಸಲು ಇದೊಂದು ಕುತಂತ್ರ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ, ನನ್ನನ್ನು ಕೊಲೆ ಮಾಡಿ ಬಿಸಾಡಬಹುದು, ಆದರೆ ರಾಜ್ಯದಲ್ಲಿ ಜನರು ದಂಗೆ ಏಳುತ್ತಾರೆ ಎಂದು ಮಹೇಶ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.ಇನ್ನು ಮಹೇಶ್ ಶೇಟ್ಟಿ ವಿರುದ್ಧ 2012ರ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯನ್ನು ಆಧರಿಸಿ, ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಾತ್ಮಕ ಪೋಸ್ಟ್ ಗಳನ್ನು ಹಂಚಿಕೊಂಡಿದ್ದ ಆರೋಪವಿದೆ. ಇದು ಧರ್ಮಸ್ಥಳದ ಧಾರ್ಮಿಕ ಮೌಲ್ಯಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಆರೋಪಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


