
ಕುಣಿಗಲ್: ಸ್ವಾಮೀಜಿ ಒಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನಲ್ ಪ್ರತಿನಿಧಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಂಗರಹಳ್ಳಿ ಗ್ರಾಮದಲ್ಲಿನ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮಿ ಎಂಬುವರಿಗೆ ತುಮಕೂರಿನ ಯುಟ್ಯೂಬ್ ಚಾನೆಲ್ ಒಂದರ ಪ್ರತಿನಿಧಿ ಹಣಕ್ಕಾಗಿ ಬೇಡಿಕೆ ಇಟ್ಟು ಕಳೆದ ಕೆಲ ತಿಂಗಳದಿಂದ ಪೀಡಿಸುತ್ತಿದ್ದರು ಎನ್ನಲಾಗಿದೆ.
ಮುಂದುವರೆದು ಮಠದ ಕೆಲ ಅಭಿಮಾನಿಗಳಿಗೆ ಕರೆ ಮಾಡಿ ಮಠಕ್ಕೆ ಸಂಬಂಧಿಸಿದಂತ ಹಲವು ಗುಪ್ತ ವಿಷಯಗಳನ್ನು ತಾವು ಹೊಂದಿದ್ದು ಇದನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡದಿರಲು 25 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಬೆದರಿಕೆಗೆ ಮಠದ ವತಿಯಿಂದ ಯಾರು ಸ್ಪಂದಿಸದ ಕಾರಣ ಯೂಟ್ಯೂಬ್ ಚಾನೆಲ್ ನಲ್ಲಿ ಮಠಾಧೀಶರು ಸೇರಿದಂತೆ ಮಠದ ಬಗ್ಗೆ ವಿಡಿಯೋ ಪ್ರಸಾರ ಮಾಡಿದ್ದರು. ಈ ಬಗ್ಗೆ ಮಠಾಧೀಶ ಬಾಲ ಮಂಜುನಾಥ ಸ್ವಾಮಿ, ಹುಲಿಯೂರು ದುರ್ಗ ಪೊಲೀಸರಿಗೆ ಯೂಟ್ಯೂಬ್ ಚಾನೆಲ್ ನ ಪ್ರತಿನಿಧಿ ಮೇಲೆ ತಮ್ಮ ಹಾಗೂ ಮಠದ ವಿರುದ್ಧ ಕಲ್ಪಿತ ಮತ್ತು ಆಧಾರ ರಹಿತ ಆರೋಪ ಮಾಡಿ ವಿಡಿಯೋ ಬಿತ್ತರಿಸಿದ್ದು ಹಣಕ್ಕೆ ಬೆದರಿಕೆ ಹಾಕಿದ ಹಿನ್ನೆಲೆ ಬಗ್ಗೆ ವಿವರವಾದ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ ಹುಲಿಯೂರು ದುರ್ಗ ಪೊಲೀಸರು, ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಹಣಕ್ಕೆ ಬೇಡಿಕೆ- ಯೂಟ್ಯೂಬರ್ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


