
ಮೈಸೂರು: ಮೈಸೂರಿನ ಸಾಲಿಗ್ರಾಮನ ಭೇರ್ಯ ಗ್ರಾಮದ ಲಾಡ್ಜ್ ವೊಂದರಲ್ಲಿ 20 ವರ್ಷದ ವಿವಾಹಿತ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದು ಪ್ರಿಯಕರನೇ ಈ ದುಷ್ಕೃತ್ಯ ಎಸಗಿದ್ದಾನೆ.
ಮೃತ ಮಹಿಳೆಯನ್ನು ಗೆರಸನಹಳ್ಳಿ ಗ್ರಾಮದ ರಕ್ಷಿತಾ ಎಂದು ಗುರುತಿಸಲಾಗಿದೆ. ಪ್ರಿಯಕರ ಸಿದ್ದರಾಜು ಎಂಬಾತ ರಕ್ಷಿತಾ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಕೊಂದಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ಸಾಲಿಗ್ರಾಮದ ಪೊಲೀಸರು ಸಿದ್ದರಾಜುನನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಯುವಕನನ್ನು ರಕ್ಷಿತಾ ಮದುವೆಯಾಗಿದ್ದರೂ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಸಿದ್ದರಾಜು ರಕ್ಷಿತಾಳನ್ನು ಕರೆಸಿಕೊಂಡಿದ್ದಾನೆ. ನಂತರ ಲಾಡ್ಜ್ ಗೆ ಕರೆದುಕೊಂಡು ಹೋಗಿ ಸಿದ್ದರಾಜು ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಕೊಲೆ ಮಾಡಿ ನಂತರ ಸಿದ್ದರಾಜು ಮೊದಲು ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದನು. ಆದರೆ ತನಿಖೆಯ ನಂತರ ಅಸಲಿ ಸಂಗತಿ ಬಯಲಿಗೆ ಬಂದಿದೆ.
ಬರ್ಬರವಾಗಿ ಪ್ರಿಯತಮೆ ಕೊಂದ ಪ್ರಿಯಕರ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


