
ಬೆಂಗಳೂರು: ಡ್ರಗ್ ಪೆಡ್ಲರ್ಸ್ ಜೊತೆ ಸ್ನೇಹ ಬೆಳೆಸಿ ಪಾರ್ಟಿ ಮಾಡಲಾಗಿದೆ ಎಂಬ ಆರೋಪದ ಮೇಲೆ ಚಾಮರಾಜಪೇಟೆ ಠಾಣೆ ಇನ್ಸ್ ಪೆಕ್ಟರ್ ಹಾಗೂ 10 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಚಾಮರಾಜ ಪೇಟೆಯ 6 ಮಂದಿ ಪೊಲೀಸರು ಹಾಗೂ ಜೆ.ಜೆ.ನಗರದ 4 ಮಂದಿ ಪೊಲೀಸರು ಸಸ್ಪೆಂಡ್ ಆಗಿದ್ದಾರೆ. ಚಾಮರಾಜ ಪೇಟೆ ಠಾಣೆ ಇನ್ಸ್ ಪೆಕ್ಟರ್ ಮಂಜಣ್ಣ ಅವರನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಉಳಿದ ಸಿಬ್ಬಂದಿಯನ್ನು ಡಿಸಿಪಿ ಗಿರೀಶ್ ಅಮಾನತುಗೊಳಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ಗಳಾದ ರಮೇಶ್, ಶಿವರಾಜ್ ಕಾನ್ಸ್ ಟೇಬಲ್ ಗಳಾದ ಮಧುಸೂದನ್, ಪ್ರಸನ್ನ, ಶಂಕರ್, ಆನಂದ್ ಹಾಗೂ ಜೆ.ಜೆ. ನಗರ ಪೊಲೀಸ್ ಠಾಣೆಯ ಎಎಸ್ ಐ ಕುಮಾರ್, ಹೆಡ್ ಕಾನ್ಸ್ ಟೇಬಲ್ ಆನಂದ್, ಸಿಬ್ಬಂದಿ ಬಸವಗೌಡ ಸೇರಿ ಹತ್ತು ಮಂದಿ ಅಮಾನತು ಮಾಡಲಾಗಿದೆ.
ಡ್ರಗ್ ಪೆಡ್ಲರ್ಸ್ಗಳ ಜೊತೆ ನೇರ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಸೇರಿದಂತೆ ಪಶ್ಚಿಮ ವಿಭಾಗದ 10 ಮಂದಿ ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದು, ಇಲಾಖಾ ತನಿಖೆ ಮುಂದುವರೆದಿದೆ.
ಡ್ರಗ್ ಪೆಡ್ಲರ್ಸ್ ಜೊತೆ ಸ್ನೇಹ ಬೆಳೆಸಿ ಪಾರ್ಟಿ ಇನ್ಸ್ ಪೆಕ್ಟರ್, 10 ಪೊಲೀಸರ ಅಮಾನತು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


