
ಮೈಸೂರು: ನಗರದ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಅಮಾನತ್ತುಪಡಿಸಿಕೊಂಡಿದ್ದ 13 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಲಾಯಿತು.
ಡ್ರಗ್ ಡಿಸ್ಪೋಸಲ್ ಕಮಿಟಿಯ ಸಮ್ಮುಖದಲ್ಲಿ ಮೈಸೂರು ಜಿಲ್ಲೆ ಜಯಪುರ ಹೋಬಳಿಯ ಗುಜ್ಜೆಗೌಡನಪುರದಲ್ಲಿ ದಹನಕಾರಕ ಪ್ಲಾಂಟ್ ನಲ್ಲಿ ಪರಿಸರ ಅಧಿಕಾರಿ ಹಾಗೂ ಪಂಚಾಯ್ತಿದಾರರ ಸಮಕ್ಷಮದಲಲಿ ಪರಿಸರ ಮಾಲಿನ್ಯವಾಗದಂತೆ ನಾಶಪಡಿಸಲಾಯಿತು. ಮೈಸೂರು ನಗರದ ಎನ್ಡಿಪಿಎಸ್ ಕಾಯ್ದೆಯ 23 ಪ್ರಕರಣಗಳಲ್ಲಿ ಒಟ್ಟು 43ಕೆ.ಜಿ 308ಗ್ರಾಂ ಗಾಂಜಾ, 1 ಪ್ರಕರಣದಲ್ಲಿ 3ಗ್ರಾಂ 75 ಮಿ.ಗ್ರಾಂ ಮಾದಕ ಪದಾರ್ಥಗಳನ್ನು ನಾಶಪಡಿಸಲಾಗಿದೆ. ಇವುಗಳ ಅಂದಾಜು ಮೌಲ್ಯ 13,15,000 ರೂ. ಆಗಿದೆ. ಈ ವೇಳೆ ಮೈಸೂರು ನಗರ ಡ್ರಗ್ ಡಿಸ್ಪೋಸಲ್ ಕಮಿಟಿಯ ಛೇರ್ ಮನ್ ಕೆ.ಎಸ್.ಸುಂದರ್ ರಾಜ್, ಡಿಸಿಪಿ ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ಹಾಗೂ ಕಮಿಟಿಯ ಸದಸ್ಯ ಕಾರ್ಯದರ್ಶಿ ಮಹಮ್ಮದ್ ಶರೀಫ್, ಎಸಿಪಿ ನಗರ ಅಪರಾಧ ವಿಭಾಗ ಹಾಗೂ ಸದಸ್ಯ ಮುಸ್ತಾಕ್ ಪಾಷ ಇನ್ನಿತರರು ಇದ್ದರು.
3 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


